ಪುತ್ತೂರು: ಪುತ್ತೂರಿನ ಪರ್ಲಡ್ಕದ ಗೋಳಿಕಟ್ಟೆ ನಿವಾಸಿ, ಅಡಿಕೆ ವ್ಯಾಪಾರಿಯಾಗಿದ್ದ ಮೊಯ್ದು ಕುಟ್ಟಿ ಹಾಜಿ(97.ವ) ಅವರು ಅನಾರೋಗ್ಯದಿಂದ ಜು.30ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಪುತ್ತೂರಿನಲ್ಲಿ ಶಾಲಿಮಾರ್ ಟ್ರೇಡರ್ಸ್ ಎಂಬ ಅಡಿಕೆ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದ ಮೊಯಿದು ಕುಟ್ಟಿ ಹಾಜಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು .
ಮೃತರು ಐದು ಹೆಣ್ಣು ಮತ್ತು ಒರ್ವ ಮಗನನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ಎಪಿಎಂಸಿ ನಿರ್ದೇಶಕ ವಿ ಎಚ್ ಶಕುರ್ ಹಾಜಿ ರವರ ಸಹೋದರ ಮಾವರಾಗಿದ್ದಾರೆ.