ಪುತ್ತೂರು:ಕಾಣಿಯೂರು-ಚಾರ್ವಾಕ-ದೋಲ್ಪಾಡಿ ಈ ಮೂರು ಗ್ರಾಮಗಳ ಒಳಪಟ್ಟ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ 2025-28ನೇ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಚಾರ್ವಾಕ ಕಾಪಿನಕಾಡು ಕುಮಾರನಾಥ ಫಾರ್ಮ್ಸ್ ನಲ್ಲಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆರವರ ಅಧ್ಯಕ್ಷತೆಯಲ್ಲಿ, ತಾಲೂಕು ಬಿಲ್ಲವ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜು.20 ರಂದು ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಸೊರಕೆ ಮಾತನಾಡಿ, ಬಿಲ್ಲವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ವೀರ ಪುರುಷರಾದ ಕೋಟಿ-ಚೆನ್ನಯರ ಆದರ್ಶವನ್ನು ಮೈಗೂಡಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಸಂಘವು ಸಮಾಜದ ಏಳಿಗೆಗೆ ಸದಾ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ವಸಂತ ದಲಾರಿರವರು 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ತೇಜಸ್ ವಿ. ಸೊರಕೆ ಉಪಸ್ಥಿತರಿದ್ದರು. ಸುಲೋಚನ ಮಿಯೋಲ್ಪೆ ಪ್ರಾರ್ಥಿಸಿದರು. ಸವಣೂರು ವಲಯ ಸಂಚಾಲಕ ಸಂತೋಷ್ ಕುಮಾರ್ ಮರಕ್ಕಡರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.
ಪದಾಧಿಕಾರಿಗಳ ಆಯ್ಕೆ..
ಅಧ್ಯಕ್ಷರಾಗಿ ವಿಜಯಕುಮಾರ್ ಸೊರಕೆ, ಉಪಾಧ್ಯಕ್ಷರಾಗಿ ರತ್ನಾಕರ ಕೆಳಗಿನಕೇರಿ, ಕಾರ್ಯದರ್ಶಿಯಾಗಿ ರಮೇಶ್ ಬೇಂಗಡ್ಕ, ಜೊತೆ ಕಾರ್ಯದರ್ಶಿಯಾಗಿ ಅನಿಲ್, ಕೋಶಾಧಿಕಾರಿಯಾಗಿ ವಿಶ್ವನಾಥ ಕಲಾಂಗಜೆ, ಮಹಿಳಾ ಸಂಘದ ಅಧ್ಯಕ್ಷೆಯಾಗಿ ಚಂದ್ರಿಕಾ ಕೂರೇಲು, ಉಪಾಧ್ಯಕ್ಷರಾಗಿ ಸುಲೋಚನಾ ಮಿಯೋಲ್ಪೆ, ಕಾರ್ಯದರ್ಶಿಯಾಗಿ ಸವಿತ ಮಿಯೋಲ್ಪೆ, ಜೊತೆ ಕಾರ್ಯದರ್ಶಿಯಾಗಿ ವನಿತಾ ಕುಂಬ್ಲಾಡಿ, ಕೋಶಾಧಿಕಾರಿಯಾಗಿ
ಚೇತನ ನಡುಬೈಲುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.