ಜುಲೈ 31 ರಂದು ಭಾರತ್ ಅಟೋಕಾರ್ಸ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ , ಚಿಕಿತ್ಸಾ ಶಿಬಿರ

0

ಪುತ್ತೂರು : ಮಾರುತಿ ಸುಝಕಿ ಕಾರುಗಳ ವಿತರಕ ಸಂಸ್ಥೆ ಇಲ್ಲಿನ ಹಾರಾಡಿಯ ಭಾರತ್ ಅಟೋ ಕಾರ್ಸ್ ಪ್ರೈ ಲಿ ಇದರ ನೇತೃತ್ವದಲ್ಲಿ , ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ ಪುತ್ತೂರು ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದರ ಜಂಟಿ ಆಶ್ರಯದೊಂದಿಗೆ ಜು.31ರಂದು ಅಪರಾಹ್ನ ಗಂಟೆ 2 ರಿಂದ 5 ರ ತನಕ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಭಾರತ್ ಅಟೋ ಕಾರ್ಸ್ ಸಂಸ್ಥೆ ಆವರಣದಲ್ಲಿ ನಡೆಯಲಿದೆ.


ಕಣ್ಣಿನ ಸಂಪೂರ್ಣ ತಪಾಸಣೆ , ಬಿ ಪಿ ಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಸೌಲಭ್ಯ , ರಿಯಾಯಿತಿ ದರದಲ್ಲಿ ಕನ್ನಡಕ ಒದಗಿಸುವ ಕಾರ್ಯ ಈ ಮೊದಲಾದ ಸೇವೆ ಇರಲಿದ್ದು , ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಭಾರತ್ ಅಟೋಕಾರ್ಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here