ಪುತ್ತೂರು:ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇದರ ಸರಣಿ ಕಾರ್ಯಕ್ರಮ- ನೃತ್ಯಾಂತರಂಗದ 133ನೇ ಸರಣಿಯಲ್ಲಿ ದುಬೈಯ ಬಾಲಪ್ರತಿಭೆ ನಿತಾರಾ ನಾಯರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಅಭ್ಯಾಗತರಾದ ಎಸ್.ಡಿ.ಪಿ. ರೆಮೆಡೀಸ್ ನ ಸಹ ಪಾಲುದಾರರಾದ ರೂಪಲೇಖಾ ಕಲಾವಿದೆ ನಿತಾರಾಳ ಶ್ರದ್ಧೆ, ಪರಿಶ್ರಮ ಹಾಗೂ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ರವರ ಕಲಾಪರಿಶ್ರಮದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತನ್ನಾಡಿದರು.ಶೌರೀಕೃಷ್ಣ ಶಂಖನಾದ, ವಿದುಷಿ ಪ್ರೀತಿಕಲಾರವರು ಪ್ರಾರ್ಥನೆಗೈದರು. ಪೂರ್ವಿ ಬಿ. ಸಿ ನಿರೂಪಣೆಗೈದರು.
