ಬಡಗನ್ನೂರು: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೋನಹಳ್ಳಿಯ ಶ್ರೀ ವನದುರ್ಗ ದೇವಸ್ಥಾನದ ಶಾಖಾ ಮಠದಲ್ಲಿ ಚತುರ್ಮಾಸ್ಯ ಆಚರಣೆಯಲ್ಲಿರುವ ಮಹಾಮಂಡಲೇಶ್ವರ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ,ಮಾಜಿ ಅಧ್ಯಕ್ಷ ಜಯಂತ್ ನಡುಬೈಲ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲ್ಲಿಂಬಿ ಕ್ಷೇತ್ರದ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಸೆಂಟರ್, ಟ್ರಸ್ಟಿಗಳಾದ ನಾರಾಯಣ್ ಮಚ್ಚಿನ್, ಪ್ರಮಲ್ ಕುಮಾರ್ ಕಾರ್ಕಳ, ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ ಮತ್ತು ಜ್ಯೋತಿ ಪ್ರಮಲ್ ಕುಮಾರ್, ಜಯರಾಮ್ ಬೆಳುವಾಯಿ ಭೇಟಿ ನೀಡಿ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.