ಸವಣೂರು: ಶ್ರೀ ಗೌರಿಗಣೇಶ ಸೇವಾ ಸಂಘ ನೇರೋಳ್ತಡ್ಕ ಹಾಗೂ ಗೌರಿಗಣೇಶ ಉತ್ಸವ ಸಮಿತಿಯ ವತಿಯಿಂದ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದಲ್ಲಿ ನಡೆಯಲಿರುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಜುಲೈ 30ರಂದು ನೇರೋಳ್ತಡ್ಕ ವಿನಾಯಕ ನಗರ ಗೌರಿಸದನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಶ್ರೀ ಗೌರಿಗಣೇಶ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಗಿರಿಶಂಕರ ಸುಲಾಯ, ಅಧ್ಯಕ್ಷ ಮಹೇಶ್ ಕೆ ಸವಣೂರು, ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ, ಜೊತೆ ಕಾರ್ಯದರ್ಶಿ ನಿತಿನ್ ಪೂಜಾರಿಮೂಲೆ, ಕಟ್ಟೆ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ತುಂಬೆತ್ತಡ್ಕ, ಸಮಿತಿಯ ಸದಸ್ಯರಾದ ಮೋಹಿತ್ ಕುಮಾರಮಂಗಲ, ಶೀನಪ್ಪ ಶೆಟ್ಟಿ ನೆಕ್ಕರಾಜೆ, ರಾಜು ಕುಲಾಲ್ ಪುಣ್ಚಪ್ಪಾಡಿ, ರಾಮಚಂದ್ರ ಕೊಳಂಬೆತ್ತಡ್ಕ, ಸೂರಪ್ಪ ಗೌಡ ಬದಿಯಡ್ಕ, ತೀರ್ಥನ್ ಬೊಳ್ಳಾಜೆ, ಶಿವರಾಮ ಗೌಡ ನೆಕ್ರಾಜೆ, ರಕ್ಷಿತ್ ನೂಜಾಜೆ ಮೊದಲಾದವರು ಉಪಸ್ಥಿತರಿದ್ದರು.