ಪುತ್ತೂರು: ತಿಂಗಳುಗಳ ಕಾಲ ಸುಮ್ಮನಿದ್ದ ಒಂಟಿ ಸಲಗ ಮತ್ತೆ ವಾಕಿಂಗ್ ಹೊರಟಿದ್ದು ಜು.31 ರಂದು ಬೆಳಿಗ್ಗೆ ಕೆಯ್ಯೂರು ಗ್ರಾಮದ ದೇರ್ಲ ವಿನಯ ಕುಮಾರ್ ರೈಯವರ ಮನೆಯ ಎದುರಿನ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಕಾಡಾನೆಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಆರ್.ಎಫ್ ಕಿರಣ್ ಬಿ.ಎಂ ಹಾಗೂ ಸಿಬ್ಬಂದಿಗಳ ತಂಡ ಆಗಮಿಸಿದ್ದು ಕಾಡಾನೆಯನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯಲ್ಲಿ ಫೈಯರ್ ಮಾಡುವ ಮೂಲಕ ಆನೆಯನ್ನು ಸ್ಥಳದಿಂದ ಓಡಿಸಲು ಪ್ರಯತ್ನಿಸಲಾಗುತ್ತಿದ್ದು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆನೆಗೆ ತೊಂದರೆ ಕೊಡುದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಕೆಯ್ಯೂರು ಗ್ರಾಮ ಪಂಚಾಯತ್ ಮನವಿ ಮಾಡಿಕೊಂಡಿದೆ.
ಗ್ರಾಮಸ್ಥರು ಆನೆಗೆ ತೊಂದರೆ ಕೊಟ್ಟರೆ ಆನೆ ಮತ್ತೆ ಕೋಪಗೊಳ್ಳುವ ಸಾಧ್ಯತೆ ಇರುವುದರಿಂದ ತೊಂದರೆ ಉಂಟಾಗುವುದು ಸಹಜ ಆದ್ದರಿಂದ ಗ್ರಾಮಸ್ಥರು ಸಾಧ್ಯವಾದಷ್ಟು ಜಾಗೃತೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಮತ್ತಿತರರು ಭೇಟಿ ನೀಡಿದ್ದಾರೆ.