ಬಡಗನ್ನೂರು: ಬಡಗನ್ನೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಜು.31ರಂದು ಸೇವಾ ನಿವೃತ್ತಿಯನ್ನು ಹೊಂದಲಿರುವ ಹರಿಣಾಕ್ಷಿ ಎ ರವರನ್ನು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯ ವತಿಯಿಂದ ಪೇಟ ತೊಟ್ಟು, ಸಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಬಡಗನ್ನೂರು ಸಭಾಂಗಣದಲ್ಲಿ ಜು.31ರಂದು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಎನ್, ಶಿಕ್ಷಕರುಗಳಾದ ಸುಹಾಸ ಬಿ, ಕರುಣಾಕರ, ಪ್ರಶಾಂತಿ ರೈ, ಚಂದ್ರಲೇಖ, ಪ್ರೀತ ಹಾಗೂ ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಬಡಗನ್ನೂರು ಶಾಲಾ ಸಹ ಶಿಕ್ಷಕಿ ವಿಜಯಲಕ್ಷ್ಮಿ, ಗೌರವ ಶಿಕ್ಷಕಿ ಚೖೆತ್ರಾ, ಜ್ಞಾನ ದೀಪ ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಮಧುಶ್ರೀ ಮತ್ತು ಮಕ್ಕಳು ಉಪಸ್ಥಿತರಿದ್ದರು.