ಪುತ್ತೂರು: ದ.ಕ.ಜಿ. ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಮೂಡುಪಡುಕೋಡಿ ಕಲಾಬಾಗಿಲು, ಬಂಟ್ವಾಳ ದ. ಕ ಇದರ ಸಹಭಾಗಿತ್ವದಲ್ಲಿ ನಡೆದ 2025-26ನೇ ಸಾಲಿನ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲಾ ಒಳಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಮುಡೈಬೆಟ್ಟು ನೆರವೇರಿಸಿದರು. ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಆಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ರಾಹುಲ್ ಟಿ. ಜಿ ಮಂಗಳೂರು ಅಧ್ಯಕ್ಷರು ದ. ಕ. ಜಿ. ಪ. ಕರಾಟೆ ಶಿಕ್ಷಕರ ಸಂಘ, ಮೋಕ್ಷಿತ್ ಎಂ. ಶೆಟ್ಟಿ ಸಿವಿಲ್ ಕಂಟ್ರಾಕ್ಟರ್, ಕರಾಟೆ ಬ್ಲ್ಯಾಕ್ ಬೆಲ್ಟ್ ರ್ ನರ್ವಲ್ದಡ್ಡ, ಗೌರವ ಉಪಸ್ಥಿತಿ ಮಂಜುನಾಥ್ ಎಂ. ಜಿ ಕ್ಷೇತ್ರಶಿಕ್ಷಣಣಾಧಿಕಾರಿಗಳು ಬಂಟ್ವಾಳ, ಆಶಾ ನಾಯಕ್ ತಾಲೂಕು ದೈ. ಶಿ. ಪರೀಕ್ಷಾಣಾಧಿಕಾರಿಗಳು ಬಂಟ್ವಾಳ ಕ್ಷೇತ್ರ, ವಿದ್ಯಾ ಸಮನ್ವಯ ಅಧಿಕಾರಿ ಬಿ. ಆರ್.ಸಿ ,ರವಿಕುಮಾರ್ ಸಿ.ಆರ್.ಪಿ.ಚೆನ್ನೈತ್ತೋಡಿ ಕಸ್ಟರ್, ಜೋಯೆಲ್ ಲೋಬೊ ಸದಸ್ಯರು ಫ್ರೌಡಶಾಲಾ ಸಹಶಿಕ್ಷಕರ ಸಂಘ, ಅಖಿಲ್ ಶೆಟ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ದೈ.ಶಿ.ಶಿ.ಸಂಘ ಹಾಗೂ ವಲಯ ನೋಡೆಲ್, ನವೀನ್ ಪಿ. ಎಸ್ ವಲಯ ನೋಡೆಲ್ ಹಾಗೂ ಉಪಾಧ್ಯಕ್ಷರು ಗ್ರೇಡ್ 1 ದೈ.ಶಿ.ಶಿ ಸಂಘ ದ. ಕ, ಶಿವಪ್ರಸಾದ್ ರೈ ಅಧ್ಯಕ್ಷರು ಗ್ರೇಡ್ 1 ದೈ.ಶಿಕ್ಷಣ ಶಿಕ್ಷಕರ ಸಂಘ ದ. ಕ., ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷರು ಸರಕಾರಿ ನೌಕರರ ಸಂಘ ಬಂಟ್ವಾಳ, ರಾಜೇಂದ್ರ ರೈ ಅಳಿಕೆ ಅಧ್ಯಕ್ಷರು ತಾಲೂಕು ದೈ ಶಿಕ್ಷಣ ಶಿಕ್ಷಕರ ಸಂಘ, ಜನಾರ್ದನ ಕೊಯಿಲ ಕಾರ್ಯದರ್ಶಿ ತಾಲೂಕು ದೈ.ಶಿ.ಶಿ.ಸಂಘ, ಜಯರಾಮ್ ಅಧ್ಯಕ್ಷರು ಫ್ರೌಡಶಾಲಾ ಶಿಕ್ಷಕರ ಸಂಘ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ಶಬಾನಾ ಮನ್ಸೂರ್, ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ ಬುರೂಜ್ ಹೈಸ್ಕೂಲ್ ರಝಾನಗರ ವಹಿಸಿದ್ದರು. ಗೌರವ ಉಪಸ್ಥಿತಿ ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ , ಬುರೂಜ್ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಲೇರಿಯನ್ ಲಸ್ರಾದೋ, ನಿಶಿತಾ, ಕೋಶಾಧಿಕಾರಿಯಾದ ಜಯರಾಮ್ ಶೆಟ್ಟಿ, ಮುಖ್ಯ ಶಿಕ್ಷಕಿಯರಾದ ಜಯಶ್ರೀ ಸಾಲ್ಯಾನ್, ಎಲ್ಸಿ ಲಸ್ರಾದೋ, ರಾಜ್ಯ ಕರಾಟೆ ತತರಬೇತುದಾರ ನದೀಮ್, ಶಾಲಾ ನಾಯಕಿ ಸನಾ ಶೆಟ್ಟಿ ಉಪಸ್ಥಿತರಿದ್ದರು.