ಅಗಲಿದ ಕೆ. ಶೀನಪ್ಪ ಶೆಟ್ಟಿ, ಡಾ. ಮುದ್ರಜೆ ರಾಮಚಂದ್ರ ಭಟ್‌ರಿಗೆ ನುಡಿನಮನ

0

ಉಪ್ಪಿನಂಗಡಿ: ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನುಪಮ ಕೊಡುಗೆ ನೀಡಿ ಇತ್ತೀಚೆಗೆ ನಿಧನರಾದ ವೈದ್ಯ ಕೆ. ಶೀನಪ್ಪ ಶೆಟ್ಟಿ ಹಾಗೂ ಡಾ. ಮುದ್ರಜೆ ರಾಮಚಂದ್ರ ಭಟ್ ರವರಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮ ಆ.1ರಂದು ನಡೆಯಿತು.


ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಮಾತನಾಡಿ, 2002 ರಲ್ಲಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ದೇವಾಲಯದ ಜೀರ್ಣೋದ್ದಾರ ಕಾರ್ಯ ಮತ್ತು ಬ್ರಹ್ಮಕಲಶೋತ್ಸವವು ಅದ್ದೂರಿಯಾಗಿ ನಡೆಯಲು ಪ್ರ್ರೇರಣಾದಾಯಿಯಾಗಿದ್ದ ಡಾ. ಮುದ್ರಜೆ ರಾಮಚಂದ್ರ ಭಟ್ ರವರ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ದೇವಾಲಯದಲ್ಲಿ ಭಜನಾ ಮಂಡಳಿಯನ್ನು ಯಕ್ಷಗಾನ ಸಂಘವನ್ನು ಸ್ಥಾಪಿಸಿ, ಜನತೆಯನ್ನು ಭಕ್ತಿ ಪಥದಲ್ಲಿ ಕೊಂಡೊಯ್ದ ಹಾಗೂ ತನ್ನ ವಶದಲ್ಲಿದ್ದ ದೇವಾಲಯದ ಭೂಮಿಯನ್ನು ಸ್ವಯಂ ಪ್ರೇರಣೆಯಿಂದ ದೇವಾಲಯಕ್ಕೆ ಹಿಂದುರುಗಿಸಿದ ವೈದ್ಯ ಕೆ ಶೀನಪ್ಪ ಶೆಟ್ಟಿಯವರ ತ್ಯಾಗಶೀಲತೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.


ವ್ಯವಸ್ಥಾಪನಾ ಸಮಿತಿಯ ಸದಸ್ಯ ಅರ್ತಿಲ ಕೃಷ್ಣ ರಾವ್ ಮಾತನಾಡಿ, ಸಮರ್ಪಕ ಸಂಪರ್ಕ ವ್ಯವಸ್ಥೆಗಳಿಲ್ಲದ ಅಂದಿನ ದಿನಗಳಲ್ಲಿ ಮಳೆಗಾಲವೆನ್ನದೆ ಅಪಾಯವನ್ನು ಲೆಕ್ಕಿಸದೆ ಮನೆ ಮನೆಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ ಮುದ್ರಜೆ ರಾಮಚಂದ್ರ ಭಟ್ ರವರ ಹಾಗೂ ಅಗಣಿತ ಸಂಖ್ಯೆಯ ಗಿಡಮೂಲಿಕೆಗಳ ಬಗ್ಗೆ ಅರಿವು ಹೊಂದಿ ಔಷಧಿಗಳನ್ನು ತಯಾರಿಸುತ್ತಿದ್ದ ವೈದ್ಯ ಕೆ. ಶೀನಪ್ಪ ಶೆಟ್ಟಿಯವರ ಅಗಲಿಕೆ ನಾಡಿಗೆ ಬಲು ದೊಡ್ಡ ನಷ್ಟವಾಗಿದೆ ಎಂದರು.


ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ, ಉದ್ಯಮಿಗಳಾದ ಯು. ರಾಮ , ಜಯಂತ ಪೊರೋಳಿ, ಕರುಣಾಕರ ಸುವರ್ಣ , ಕೈಲಾರ್ ರಾಜಗೋಪಾಲ ಭಟ್, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ ಯು., ಸುಂದರ ಗೌಡ, ಉಷಾ ಮುಳಿಯ, ಶಶಿಧರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ , ಗುಣಕರ ಅಗ್ನಾಡಿ, ವಿಶ್ವನಾಥ ರೈ, ಶಶಿಧರ್ ರೈ, ಯತೀಶ್ ಶೆಟ್ಟಿ, ಹೊನ್ನಪ್ಪ ನಾಯ್ಕ್, ಕೀರ್ತನ್ ಕುಮಾರ್, ಬಾಲಕೃಷ್ಣ ರೈ, ಡಾ. ಯತೀಶ್ ಕುಮಾರ್ ಶೆಟ್ಟಿ, ಗಿರೀಶ್, ಕೆ ಜಗದೀಶ್ ಶೆಟ್ಟಿ, ಐ. ಚಿದಾನಂದ ನಾಯಕ್, ವಿಜಯಲಕ್ಷ್ಮಿ ಬಿ. ರೈ , ಶೈಮ್ಮಿ ವೈ. ಶೆಟ್ಟಿ, ಹೇಮಲತಾ ಬಿ. ಶೆಟ್ಟಿ, ಪ್ರಪುಲ್ಲಾ ಜೆ. ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ದೇವಾಲಯದ ಸಿಬ್ಬಂದಿ ಪದ್ಮನಾಭ ಕುಲಾಲ್, ಕೆ. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here