ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವರ ಮಹಿಳಾ ವೇದಿಕೆ ಆಲಂಕಾರು ಇವರ ಆಶ್ರಯದಲ್ಲಿ ಆ.3 ಅದಿತ್ಯವಾರ ದಂದು ಬಿಲ್ಲವರ ಆಟಿಕೂಟ
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆದು 11:00 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದೆ. ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಮತ್ತು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ,ಸನ್ಮಾನ ಕಾರ್ಯಕ್ರಮ ನಡೆದು ನಂತರ ಆಟಿಕೂಟದ ಭೋಜನ ಕಾರ್ಯಕ್ರಮ ನಡೆಯಲಿದೆ ಎಂದು ಆಲಂಕಾರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಲ್ಲಿಕಾ ಜಯಕರ ಪೂಜಾರಿ ಕಲ್ಲೇರಿ, ಕಾರ್ಯದರ್ಶಿ,ಚೈತ್ರ ಕೇಪುಳು, ಜೂತೆ ಕಾರ್ಯದರ್ಶಿ ಭವ್ಯ ಕೇಪುಳು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.