ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಜಿ.ಎಸ್.ಬಿ. ಸಮಾಜದ ಗೃಹಿಣಿಯರು ದೇವಾಲಯದ ತುಳಸಿ ಕಟ್ಟೆಯಲ್ಲಿ ಸಾಮೂಹಿಕ ಚೂಡಿ ಪೂಜಾ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದಲ್ಲಿ ಕೆ. ಪೂಜಾ ಪ್ರಭು, ಪಿ ನಂದಿತಾ ಭಟ್ ಕರಾಯ, ಗೀತಾ ನಾಯಕ್, ಕೆ ಶೊಭಾ ಭಟ್, ಸವಿತಾ ಭಟ್, ಎನ್ ಶ್ಯಾಮಲ ಶೆಣೈ, ವೀಣಾ ಮಲ್ಯ, ವಿಜಯ ಶೆಣೈ, ಎನ್. ಸಂಜನಾ ಕಾಮತ್ ಕೆ., ಮಮತಾ ನಾಯಕ್ ಎಸ್., ರೇಖಾ ಭಟ್, ಅಕ್ಷತಾ ನಾಯಕ್, ಎನ್. ಶ್ರೆಯಾ ಕಾಮತ್, ಕೆ.ಜಯಲಕ್ಷ್ಮೀ ನಾಯಕ್, ಮಾಯ ಭಟ್, ಜಯಂತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.