ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ದ್ವಿಚಕ್ರ ಸವಾರನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಆ.2ರಂದು ನಡೆದಿದೆ.
ಇಲ್ಲಿನ ಮಠ ನಿವಾಸಿ, ಉಪ್ಪಿನಂಗಡಿಯ ಫ್ಯಾಷನ್ ವರ್ಲ್ಡ್ ಜವುಳಿ ಅಂಗಡಿಯ ಮಾಲಕ ಇಬ್ರಾಹೀಂ ಮೃತ ಸವಾರ. ಮಠದಿಂದ ಉಪ್ಪಿನಂಗಡಿಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇವರಿಗೆ ಇಲ್ಲಿನ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.