ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಿಯಡ್ಕ ವಲಯದ ಮೇನಾಲ ಕಾರ್ಯಕ್ಷೇತ್ರದ ಮಾಸಿಕ ಸಭೆಯ ಒಕ್ಕೂಟದ ಅಧ್ಯಕೆ ಗೀತಾ ರವರ ಅಧ್ಯಕ್ಷತೆಯಲ್ಲಿ ಜು.27ರಂದು ಮೇನಾಲ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಸೇವಾಪ್ರತಿನಿಧಿ ಸುಂದರ್ ಜಿ ಯವರು ಯೋಜನೆಯ ಕಾರ್ಯಕ್ರಮಗಳಾದ, ಜ್ಞಾನದೀಪ ಶಿಕ್ಷಕರ ಬಗ್ಗೆ ಸುಜ್ಞಾನ ನಿಧಿ, ನಿರ್ಗತಿಕರ ಮಾಸಶಾನ ಮುಂತಾದ ಹಲವು ವಿಷಯಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೂಲಕ ಸಿಗುವ ಸೌಲಭ್ಯಗಳ ಬಗ್ಗೆ, ಯೋಜನೆಯು SBI ಬ್ಯಾಂಕ್ ಮೂಲಕ ಸದಸ್ಯರು ಸಾಲವನ್ನು ಪಡೆಯುವ ಹಾಗೂ ಮರುಪಾವತಿ ವಿಧಾನ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶೀನ ಯಸ್ ಪದಾಧಿಕಾರಿಗಳಾದ ಸರಸ್ವತಿ ಮತ್ತು ಅಕ್ಷತಾ ಉಪಸ್ಥಿತರಿದ್ದರು.