ಪುತ್ತೂರು: ಕುಡಿಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ಕೂಟ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಸಿಎ ಆಲ್ವಿನ್ ಎಚ್. ರೊಡ್ರಿಗಸ್ ಚೆನ್ನೆಮನೆ ಆಟವಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಪಾಠದ ಜೊತೆ ಸಂಪ್ರದಾಯವನ್ನು ಬೆಳೆಸಬೇಕು. ಕುಟುಂಬದಲ್ಲಿ ಒಗ್ಗಟ್ಟು ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸುವುದರ ಮೂಲಕ ಉತ್ತಮ ನಾಗರೀಕರಾಗಬೇಕು ಎಂದು ಹೇಳಿದರು. ಎಸ್‌ಡಿಎಂಸಿ ಗೌರವಾಧ್ಯಕ್ಷ ರಾಮ ಜೋಯಿಸ ಮಾತನಾಡಿ ಆಟಿ ಕೂಟದ ಮಹತ್ವ, ಆಟಿಯಲ್ಲಿ ತಿನ್ನುವ ಆಹಾರ ಅಭ್ಯಾಸಗಳು, ಒಳಾಂಗಣ ಆಟಗಳು ಮತ್ತು ಔಷಧಿಗಳ ಬಗ್ಗೆ ಮಾಹಿತಿ ನೀಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಖಒ ಎಸೋಸಿಯೇಟ್ಸ್‌ನ ಎಲ್ರೋನ್ ರೊಡ್ರಿಗಸ್, ಮಂಗಳೂರು ಡಾ| ಅಂಜೆಲಾ ಸೆರಾ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಗೆ ಉಚಿತ ಕೊಡುಗೆ:
ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್, ಬೆಲ್ಟ್ ಹಾಗೂ ಕ್ರೀಡಾ ಸಮವಸ್ತ್ರ ದಾನಿಗಳ ಸಹಕಾರದಲ್ಲಿ ನೀಡಲಾಯಿತು. ಕುಡಿಪಾಡಿ ಸಿ.ಎಂ. ನಗರದ ಅಲ್-ಅಮೀನ್ ಯಂಗ್‌ಮೆನ್ ಎಸೋಸಿಯೇಶನ್‌ನಿಂದ ಐಡಿ ಕಾರ್ಡ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಗೌಡರವರು ಮಕ್ಕಳ ಬೆಲ್ಟ್ ಹಾಗೂ ಸಂತೋಷ್ ಕ್ರಾಸ್ತ ಕುಡಿಪಾಡಿ, ರಾಜೇಶ್ ಡಿಸೋಜ ಬಲ್ನಾಡು, ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರು ಕ್ರೀಡಾ ಸಮವಸ್ತ್ರ ಕೊಡುಗೆಯಾಗಿ ನೀಡಿದರು.
ಮುಖ್ಯಗುರು ಜಾನೆಟ್ ಸಿಕ್ವೇರಾ ಸ್ವಾಗತಿಸಿ ಸಹಶಿಕ್ಷಕ ಗಣೇಶ್ ಎಸ್. ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.