ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ “ಆಟಿದ ಕೂಟೊ” ಕಾರ್ಯಕ್ರಮವನ್ನು ಆ 2ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿಯ ಗೌರವಾದ್ಯಕ್ಷ ಶ್ರೀಧರ ರೈ ಮಾದೋಡಿಯವರು ದೀಪಬೆಳಗಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಮನ್ಮಥ ಶೆಟ್ಟಿಯವರು ಹಿಂಗಾರ ಅರಳಿಸುವ ಮೂಲಕ, ಸಂಚಾಲಕ ಜಯಸೂರ್ಯ ರೈ ಮಾದೋಡಿ ಚೆನ್ನೆಮಣೆ ಆಡುವುದರ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿ ಮನ್ಮಥ ಶೆಟ್ಟಿ ಮಾತನಾಡಿ, ತುಳು ಭಾಷೆ, ತುಳು ಸಂಸ್ಕೃತಿ, ತುಳು ಆಚರಣೆ, ಮತ್ತು ಆರಾಧನೆಗೆ ನಮ್ಮ ಹಿರಿಯರು ಉತ್ತಮ ಕಾಣಿಕೆ ನೀಡಿದ್ದಾರೆ. ನಾವು ಪ್ರಕೃತಿಯಿಂದ ಸಿಗುವ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವಂತರಾಗಬೇಕು. ನಮ್ಮ ಸಂಸ್ಕ್ರತಿಯನ್ನು ಉಳಿಸುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಏನೆಂದು ಬಹಳ ಸವಿವರವಾಗಿ ತಿಳಿಸಿಕೊಟ್ಟರು.
ಸಭಾಧ್ಯಕ್ಷತೆಯನ್ನು ವಹಿಸಿರುವ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯರು ಮಾತನಾಡುತ್ತಾ,’ತುಳು ಸಂಸ್ಕ್ರತಿ ನಶಿಸಿ ಹೋಗಬಾರದು ಇನ್ನೂ ಹೆಚ್ಚುಕಾಲ ತುಳು ಸಂಸ್ಕೃತಿಯ ಸೊಗಡು ಉಳಿಯಬೇಕು,ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಮ್ಮ ವಿದ್ಯಾಸಂಸ್ಥೆಯಲ್ಲಿ ಮಾಡಬೇಕಾಗಿದೆ “ಎಂದರು.
ಇನ್ನೋರ್ವ ಅತಿಥಿಯಾದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯರವರು ಮಾತನಾಡುತ್ತಾ,”ತುಳು ಸಂಸ್ಕ್ರತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು “ಎಂದರು.
ಈ ಸಂದರ್ಭದಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ ಉದಯ ರೈ ಮಾದೋಡಿ, ನಾಗೇಶ್ ರೈ ಮಾಳ, ಸಂಸ್ಥೆಯ ಟ್ರಸ್ಟಿಗಳಾದ ವೃಂದಾ.ಜೆ.ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಮೀರಾ ಭಾಸ್ಕರ ರೈ ನಂಜೆ , ಸುಶೀಲಾ ಜಗನ್ನಾಥ ರೈ ನುಳಿಯಾಲು, ಮಾದೋಡಿ, ಗಿರಿಶಂಕರ ಸುಲಾಯ, ಧನಂಜಯ ಕೇನಾಜೆ,
ಆಂಗ್ಲಮಾದ್ಯಮದ ಮುಖ್ಯಗುರು ನಾರಾಯಣ ಭಟ್ , ಸಹಆಡಳಿತಾಧಿಕಾರಿ ಹೇಮನಾಗೇಶ್ ರೈ , ಸಹಮುಖ್ಯಸ್ಥೆ ಅನಿತಾ ಜೆ.ರೈ, ಹಿರಿಯ ಶಿಕ್ಷಕಿ ಸವಿತಾ.ಕೆ, ಸ್ಕೌಟ್ ಗೈಡ್ಸ್ ಮಾಸ್ಟರ್ ದಾಮೋದರ ನೇರಳ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರಾವ್ಯ ರೈ, ಪ್ರಣಿಧಿ ಎಸ್ ಉಡುಪ, ತೃಪ್ತಿ ಕೂಟಾಜೆ , ಗೋಷಿಕಾ ಡಿ, ಶರಣ್ಯ.ಎನ್ ಪ್ರಾರ್ಥಿಸಿದರು.
ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ.ವಿ ಶೆಟ್ಟಿ ವಂದಿಸಿದರು ಶಿಕ್ಷಕರಾದ ಅಶೋಕ್ ಕುಮಾರ್ ಪಿ, ಕವಿತಾ.ವಿ.ರೈ, ಸುಶ್ಮಾ ಎಚ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಆಟಿಯಲ್ಲಿ ಮಾಡುವ ವಿಶೇಷ ಆಹಾರ ತಿನಿಸುಗಳಾದ ಕೆಸವು, ಕೆಸುವು ದಂಟು ,ಸೊಪ್ಪು ತರಕಾರಿ, ತಜಂಕು, ಅಂಬಟೆ, ಪತ್ರೊಡೆ, ಹಲಸಿನ ಗಟ್ಟಿ, ಆಟಿಸೊಪ್ಪಿನ ಪಾಯಸ, ಕಣಿಲೆ ಇತ್ಯಾದಿ ವಿಶೇಷ ಖಾದ್ಯಗಳನ್ನು ವಿದ್ಯಾರ್ಥಿಗಳು, ಅತಿಥಿಗಳು, ಪೋಷಕ ಬಂಧುಗಳು, ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಭೋಜನದೊಂದಿಗೆ ಸವಿದರು.