ಕಡಬ: ಕೆಎಪ್ ಡಿ ಸಿಯಲ್ಲಿ 31ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಜು.31ರಂದು ವಯೋನಿವೃತ್ತಿ ಹೊಂದಿದ ಶೇಷಪ್ಪ ಗೌಡ ಬೋಳ್ನಡ್ಕ ಕೊಂಬಾರು ಅವರಿಗೆ ಗೌರವಾರ್ಪಣೆ ಹಾಗೂ ಬೀಳ್ಕೊಡುಗೆ ಸಮಾರಂಭ ಕೊಂಬಾರು ಕೆಎಪ್ ಡಿಸಿ ಯಲ್ಲಿ ನಡೆಯಿತು.
ಕೆಎಪ್ ಡಿಸಿ ಸಿಬ್ಬಂದಿ ಶೇಷಪ್ಪ ಗೌಡ ದಂಪತಿಯವರನ್ನು ಕೆಎಪ್ ಡಿಸಿ ನೌಕರರ ವತಿಯಿಂದ ಸನ್ಮಾನಿಸಲಾಯಿತು. ಶಾಲು,ಪೇಟ,ಹಾರ,ಉಡುಗೊರೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕೆ.ಎಪ್ ಡಿಸಿ ಮೇಸ್ತ್ರಿ ಪ್ರಭಾಕರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಅಭಿನಂದನಾ ಭಾಷಣ ಮಾಡಿದರು. ಸಿಬ್ಬಂದಿ ಸರಸ್ವತಿ ಅಭಿನಂದನಾ ಪತ್ರ ವಾಚಿಸಿದರು. ಸಿಬ್ಬಂದಿ ಶೇಷಪ್ಪ ಶಿವರಾಮ,ಸೆಲ್ಬಕುಮಾರ್,ಪ್ರದೀಪ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿ ವಯೋನಿವೃತ್ತಿ ಹೊಂದುತ್ತಿರುವ ಶೇಷಪ್ಪರವರಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಕಮಲ ಪಿ.ಕೆ,ಕೊರಗಪ್ಪ, ಐತಪ್ಪ ಬಿ,ಶಿವರಾಮ,ಜತ್ತಪ್ಪ,ಲಿಕ್ಕಮ್ಮ,ತಂಗರಾಜ,ದನಬಾಗ್ಯ,ಶೋಬಾ,ಮುಂತಾದದವರು ಉಪಸ್ಥಿತರಿದ್ದರು.
ಹೊನ್ನಮ್ಮ ಸುಬ್ರಾಯ ಗೌಡ ಪಿಜಕ್ಕಳ, ಕೊಣಾಲು ಪ್ರೌಢಶಾಲಾ ಶಿಕ್ಷಕಿ ರಮಣಿ,ನಿವೃತ್ತ ಬಿ.ಎಸ್.ಎನ್.ಎಲ್ ಸಿಬ್ಬಂದಿ ಚೆನ್ನಪ್ಪ ಗೌಡ,ಕಡಬ ಗೃಹರಕ್ಷಕ ಸಿಬ್ಬಂದಿ ದಯಾನಂದ ಗೌಡ ಪಿಜಕ್ಕಳ, ಮಮತಾ,ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಪ್ರೊಫೆಸರ್ ಡಾ.ದಿನೇಶ್ ,ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್,
ಬಂಟಕಲ್ , ಉಡುಪಿ ಪ್ರೊಫೆಸರ್ ಅಶ್ವಿನಿ ಕೆ,ವಿಟ್ಲ ಅಂಗನವಾಡಿ ಶಿಕ್ಷಕಿ ವೀಣಾ ,ಗಣೇಶ ವಿಟ್ಲ, ಸೆಂಥಿಲ್ ಎನರ್ಜಿ ಪವರ್ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್, ಕಡಬ.
ಶಿಫ್ಟ್ ಇಂಚಾರ್ಜ್ ಗಣೇಶ ಪಿಜಕ್ಕಳ, ಯಶ್ಮಿ,ಭವ್ಯ ಶ್ರೀ, ಶರತ್ ಕುಮಾರ್ ಮುಂಡ್ರೋಟು ,ವಂಶಿಕ್ ,ಹರ್ಷಾಲಿ ಮುಂತಾದವರು ನಿವೃತ್ತರಿಗೆ ಶುಭಹಾರೈಸಿದರು. ಪುರುಷೋತ್ತಮ ಸ್ವಾಗತಿಸಿದರು.ಜನಾರ್ದನ ಬಿ ಸಿ ವಂದಿಸಿದರು. ಇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.