ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮಂಡಳಿ ಸದಸ್ಯರು ಕೇರಳ ರಾಜ್ಯದ ಶಿವಗಿರಿಗೆ ಭೇಟಿ ನೀಡಿ ಗುರುಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮೂಲಸ್ಥಾನದ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪಡೆದುಕೊಳ್ಳಲು ಮುಖ್ಯ ಅರ್ಚಕರಾದ ಶ್ರೀ ಶಿವಾನಂದ ಶಾಂತಿಯವರ ನೇತೃತ್ವದಲ್ಲಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಕ್ಷೇತ್ರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಆಡಳಿತ ಸಮಿತಿಯ ಸದಸ್ಯರಾದ ಜೈ ವಿಕ್ರಮ ಕಲ್ಲಾಪು ಬೆಳ್ತಂಗಡಿ, ನಾಗೇಶ್ ಪೂಜಾರಿ ಮಂಗಳೂರು, ನಾರಾಯಣ ಪೂಜಾರಿ ಮಚ್ಚಿನ ಮತ್ತಿತರರು ಕೇರಳ ರಾಜ್ಯದ ಶಿವಗಿರಿಗೆ ಭೇಟಿ ನೀಡಿ ಗುರುಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
