ಪುತ್ತೂರು: ಬಾವನಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವುದಲ್ಲದೆ ಮನೆಯ ಕಿಟಕಿ ಗಾಜು ಹಾಗೂ ಸ್ಕೂಟರ್ಗೆ ಹೊಡೆದು ಜಖಂಗೊಳಿಸಿರುವ ಘಟನೆ ಪೇರಲ್ತಡ್ಕದಲ್ಲಿ ಆ.1ರಂದು ನಡೆದ ಬಗ್ಗೆ ವರದಿಯಾಗಿದೆ.
ಮಾವ(ಪತ್ನಿಯ ತಮ್ಮ)ಶರೀಫ್ ರವರು ಮನೆಯಂಗಳಕ್ಕೆ ಬಂದು, ಅವರ ಹೆಂಡತಿ ನಮ್ಮ ಮನೆಗೆ ಬಂದುದಕ್ಕೆ ಗಲಾಟೆ ಮಾಡುತ್ತಿರುವುದಾಗಿ ಮಗಳು ಶಾಕೀರಾ ಕರೆ ಮಾಡಿ ತಿಳಿಸಿದ್ದಳು. ನಾನು ಅಲ್ಲಿಗೆ ಬಂದಾಗ ಶರೀಫ್ ಅಲ್ಲಿರದೆ ಆತನ ಮನೆಗೆ ಹೋಗಿದ್ದ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಆತನ ಮನೆಯಂಗಳಕ್ಕೆ ಸಂಜೆ ವೇಳೆಗೆ ಹೋಗಿದ್ದಾಗ ಅಲ್ಲಿದ್ದ ಶರೀಫ್ ನಲ್ಲಿ ಮನೆಗೆ ಬಂದು ಗಲಾಟೆ ಮಾಡಿದ್ದರ ಕುರಿತು ಪ್ರಶ್ನಿಸಿದಾಗ ಮರದ ಕೋಲಿನಿಂದ ನನ್ನ ಎರಡೂ ಕೈಗಳಿಗೆ ಮತ್ತು ಹೊಟ್ಟೆಗೆ ಹೊಡೆದಿದ್ದು, ಈ ವೇಳೆ ಓಡಿಬಂದ ಮಗ ಮಹಮ್ಮದ್ ಜಾಹೀರ್ ಹೊಡೆಯುವುದನ್ನು ತಡೆದು ಮನೆಗೆ ಕರೆದುಕೊಂಡು ಬಂದಿದ್ದ. ಹಿಂದೆಯೇ ಓಡಿ ಬಂದಿದ್ದ ಶರೀಫ್ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೋಲಿನಿಂದ ಮನೆಯ ಕಿಟಕಿಗೆ ಅಳವಡಿಸಿದ್ದ ಗ್ಲಾಸ್ಗಳಿಗೆ ಕೋಲಿನಿಂದ ಹೊಡೆದು ಜಖಂಗೊಳಿಸಿ ಮನೆಯಂಗಳದಲ್ಲಿದ್ದ ಆಕ್ಟಿವಾ ಸ್ಕೂಟರ್ಗೆ ಹೊಡೆದು ನಷ್ಟವನ್ನು ಉಂಟು ಮಾಡಿದ್ದ. ಆತನ ಬೊಬ್ಬೆ ಕೇಳಿ ಹತ್ತಿರದವರು ಅಲ್ಲಿ ಸೇರಿದ್ದ ವೇಳೆ ಶರೀಫ್ ನನಗೆ ಜೀವ ಬೆದರಿಕೆಯೊಡ್ಡಿ ಹೋಗಿರುವುದಾಗಿ ಆರೋಪಿಸಿ ಬೆಟ್ಟಂಪಾಡಿಯ ಯಕೂಬ್ ಎಂಬವರು ನೀಡಿದ್ದ ದೂರಿನ ಮೇರೆಗೆ ಆರೋಪಿ ವಿರುದ್ಧ ಕಲಂ 118(1),329(3),324(4), 351(3)ಬಿಎನ್ಎಸ್ನಂತೆ ಸಂಪ್ಯ ಪೊಲೀಸರು ಪ್ರಕರಣ(ಅ.ಕ್ರ.81/2025)ದಾಖಲಿಸಿಕೊಂಡಿದ್ದಾರೆ.