ಪೆರಾಬೆ: ಮುಂದಿನ 5 ವರ್ಷಗಳ ಅವಧಿಗೆ ಕಡಬ ತಾಲೂಕಿನ ಪೆರಾಬೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಕುಸುಮಾವತಿ ಬಾಲಕೃಷ್ಣ ಪಾಟಾಳಿ ಹಾಗೂ ಉಪಾಧ್ಯಕ್ಷೆಯಾಗಿ ಭವಾನಿಬಾಲಕೃಷ್ಣ ಪಾಲೆಚ್ಚಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.2ರಂದು ಸಂಘದ ಕಚೇರಿಯಲ್ಲಿ ನಡೆದ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾದ ಲೀಲಾವತಿ ಶೇಷಗಿರಿ ಶೆಟ್ಟಿ, ಪ್ರಕಾಶನಿ ವಿಶ್ವನಾಥ ಶೆಟ್ಟಿ, ಶಾರದಾ ಕೃಷ್ಣ ನಾಯ್ಕ, ನಾಗವೇಣಿ ಬಾಲಕೃಷ್ಣ ಗೌಡ, ಭವಾನಿ ಚಿದಾನಂದ ಬಂಗೇರ, ಶ್ವೇತ ಚಂದ್ರ, ಚಂದ್ರಿಕಾ ಶಿವರಾಮ ಗೌಡ, ನಮಿತಾ ಶೈಲೇಶ್, ಮಮತಾ ಗಣೇಶ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.,ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ, ಸಿಬ್ಬಂದಿಗಳು ಸಹಕರಿಸಿದರು.