ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಬಪ್ಪಳಿಗೆ-ಸಿಂಗಾಣಿ ಇದರ 4ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಬಪ್ಪಳಿಗೆ-ಸಿಂಗಾಣಿಯ ಗೌರವಾಧ್ಯಕ್ಷ ರಾಮಚಂದ್ರ ಕೆ. ರಾವ್, ಅಧ್ಯಕ್ಷ ಮೋಹನ್ ಗೌಡ ಸಿಂಗಾಣಿ, ಪ್ರಧಾನ ಕಾರ್ಯದರ್ಶಿ ಲಿಖಿತ್ ರಾಜ್ ಅರಸ್, ಮಾಜಿ ಅಧ್ಯಕ್ಷ ರವಿ ಬಪ್ಪಳಿಗೆ, ಸದಸ್ಯರಾದ ವಸಂತ ಬಪ್ಪಳಿಗೆ, ಸುಬ್ರಹ್ಮಣ್ಯ ಸಿಂಗಾಣಿ, ಧನ್ವಿತ್ ಸಿಂಗಾಣಿ, ಸುರೇಶ್ ನೆಕ್ಕಿತಪುಣಿ, ಕಿಟ್ಟಣ್ಣ ಮಡಿಕೇರಿ, ಸಾನ್ವಿ ಬಪ್ಪಳಿಗೆ, ಮಹೇಶ್ ಸಿಂಗಾಣಿ, ಸಂದೀಪ್ ಬಪ್ಪಳಿಗೆ, ಶಶಿಕುಮಾರ್ ಸಿಂಗಾಣಿ, ತಿಮ್ಮಪ್ಪ ಬಪ್ಪಳಿಗೆ, ಜಗದೀಶ್ ಸಿಂಗಾಣಿ, ಬಾಲಕೃಷ್ಣ ಸಿಂಗಾಣಿ, ನಿತೀಕ್ಷ್, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.
ಆ.24ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ತುಳುನಾಡ ಮಾಣಿಕ್ಯ ನಟ ಅರವಿಂದ್ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 8:30ಕ್ಕೆ ಬಪ್ಪಳಿಗೆ ಬೈಪಾಸ್ ಬಳಿಯಿಂದ ಶ್ರೀಕೃಷ್ಣ ವೇಷ ಹಾಗೂ ಕೇರಳದ ಚೆಂಡೆ, ಕುಣಿತ ಭಜನೆ, ಬೊಂಬೆ ಕುಣಿತ, ಬ್ಯಾಂಡ್ ವಾದ್ಯ, ಸುಡುಮದ್ದು ಪ್ರದರ್ಶನದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಜೊತೆಗೆ ಉದ್ದ ಕಂಬ, ಅಡ್ಡ ಕಂಬ, ಹಗ್ಗ ಜಗ್ಗಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಉದ್ದ ಕಂಬ ವಿಜೇತರಿಗೆ ರೂ.೩೫೦೧ ನಗದು ಹಾಗೂ ಫಲಕ ನೀಡಲಾಗುತ್ತದೆ. ಬೆಳಿಗ್ಗೆ ೧೦:೩೦ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು, ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ನಗರಸಭಾ ಸದಸ್ಯ ನವೀನ್ ಕುಮಾರ್, ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದಾರೆ.
ಸಂಜೆ 5:30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವೈದ್ಯ ಡಾ. ರವಿ ನಾರಾಯಣ ಭಟ್ ಸಂಜೀವಿನಿ ಕ್ಲೀನಿಕ್, ಪಟ್ಲ ಫ್ರೆಂಡ್ಸ್ ಕಲ್ಲೇಗ ಧನಂಜಯ್ ಮತ್ತಿತರರು ಭಾಗವಹಿಸಲಿದ್ದಾರೆ.