ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಯೋಜಕತ್ವದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇರ್ದೆ ಬೆಟ್ಟಂಪಾಡಿ ಇದರ ಸದಸ್ಯರಿಂದ ಇರ್ದೆ ಬೆಂದ್ರ್ ತೀರ್ಥ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರ ಮುಟ್ಟುಗಳನ್ನು ತೆಗೆದು ಸ್ವಚ್ಚಗೊಳಿಸುವ ಶ್ರಮದಾನ ಆ.3 ರಂದು ನಡೆಯಿತು.
ಬೆಂದ್ರ್ ತೀರ್ಥದ ಗುಂಡಿ ಮತ್ತು ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಸೋಹನ್. ಜಿ, ಊರಿನ ಗಣ್ಯರಾದ ಸುಬ್ರಹ್ಮಣ್ಯ ಭಟ್ ದೇವ ಕಾನ, ಪುಷ್ಪರಾಜ್ ರೈ ಬೈಲಾಡಿ, ಚಂದ್ರಹಾಸ ಮುರೂರು, ಯೋಜನೆಯ ಬೆಟ್ಟಂಪಾಡಿ ವಲಯದ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು.
