ಪುತ್ತೂರು: ಟಾಟಾ ಎಐಜಿ ಮತ್ತು ಟಾಟಾ ಎಐಎ ವಿಮೆ ಪಾಲಿಸಿಯಲ್ಲಿ ತ್ರೈಮಾಸಿಕ ಅವಧಿಯಲ್ಲಿಯೆ ಅತ್ಯಧಿಕ ವಿಮೆ ಪಾಲಿಸಿ ಮಾಡಿದ ಕುಂಬ್ರ ಸುಶಾ ಡ್ರೆಸ್ಸಸ್ ಮಾಲಕರಾದ ಸುರೇಶ್ ಕುಮಾರ್ ತಿಂಗಳಾಡಿ ಮತ್ತು ಮೋಹಿತ್ ಪೂಜಾರಿ ಗೆಜ್ಜೆಗಿರಿಯವರು ದೇಶಕ್ಕೆ 17 ಸ್ಥಾನ ಪಡೆದುಕೊಂಡಿದ್ದು ಅವರಿಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನ ಪಟ್ಟಾಯದ ಬ್ರೈಟಾನ್ ಗ್ರ್ಯಾಂಡ್ ಹೊಟೇಲ್‌ನಲ್ಲಿ ಜು.30 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟಾಟಾ ಎಐಜಿ ಮುಖ್ಯಸ್ಥರುಗಳಾದ ಎಕ್ಸ್‌ಕ್ಯೂಟಿವ್ಯ್ ವೈಸ್ ಪ್ರೆಸಿಡೆಂಟ್ ಆಂಡ್ ಹೆಡ್ ಮದಲ್ ಕಲಾಲ್, ಸೀನಿಯರ್ ಎಕ್ಸ್‌ಕ್ಯೂಟಿವ್ಯ್ ವೈಸ್ ಪ್ರೆಸಿಡೆಂಟ್ ಆಂಡ್ ಹೆಡ್ ಪ್ರತಿಕ್ ಗುಪ್ತಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.