ಕಾಣಿಯೂರು ಶಾಲೆಯಲ್ಲಿ ನೂತನ ಧ್ವಜಸ್ತಂಭ ಅನಾವರಣ – “ಅಟಿದ ಕೂಟ” ಕಾರ್ಯಕ್ರಮ

0

ಕಾಣಿಯೂರು: ಹಿಂದಿನ ಕಾಲದಲ್ಲಿ ಅಚರಿಸುತ್ತಿದ್ದ ಅಟಿ ತಿಂಗಳ ಆಚರಣೆ, ಜೀವನ ಪದ್ಧತಿಗಳಿಗೆ ತನ್ನದೇ ಆದ ಮಹತ್ವವಿದೆ ಎಂದು ದೇವಿಪ್ರಸಾದ್ ಗೌಡ ಸಜಂಕು ಹೇಳಿದರು. ಕಾಣಿಯೂರು ಸ. ಹಿ. ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾ ಎಸ್.ಡಿ.ಎಂ.ಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಣಿಯೂರು ಸ. ಹಿ.ಪ್ರಾ. ಶಾಲಾ ವಠಾರದಲ್ಲಿ ಆ 3ರಂದು ನಡೆದ ನೂತನ ದ್ವಜಸ್ತಂಭ ಉದ್ಘಾಟನೆ ಮತ್ತು ಆಟಿ ಕೂಟ ಕಾರ್ಯಕ್ರಮ ಮಾತನಾಡಿದರು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ ದ್ವಜಸ್ತಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.


ಕಾಣಿಯೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕಾಣಿಯೂರು ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಎನ್ ಎಸ್ ಡಿ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಲಲಿತಾ ದರ್ಖಾಸು,ಕಡಬ ತಾಲೂಕು ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಕಾವ್ಯಲಕ್ಷ್ಮೀ, ಕಾಣಿಯೂರು ಶಾಲಾ ಮುಖ್ಯಗುರು ಬಾಲಕೃಷ್ಣ ಕೆ, ಕಾಣಿಯೂರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಸಿಆರ್ ಪಿ ಯಶೋದ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯೆ ಗೌರಿ ಮಾದೋಡಿ , ಕಾಣಿಯೂರು ಶಾಲಾ ಎಸ್ ಡಿ ಎಂಸಿ ಉಪಾಧ್ಯಕ್ಷೆ
ಯಶೋಧ ನೇರೋಳ್ತಡ್ಕ ಉಪಸ್ಥಿತರಿದ್ದರು. ಹಿರಿಯ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಅನಿಲ ವರದಿ ವಾಚಿಸಿದರು. ಧರ್ಮೇಂದ್ರ ಕಟ್ಟತ್ತಾರು ಪ್ರಾರ್ಥಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಪದ್ಮಯ್ಯ ಗೌಡ ಅನಿಲ ವಂದಿಸಿದರು. ದೇವಕಿ ಕಟ್ಟತ್ತಾರು ಕಾರ್ಯಕ್ರಮ ನಿರೂಪಿಸಿದರು.

ಧ್ವಜಸ್ತಂಭ ಅನಾವರಣ:
ಕಾಣಿಯೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕೊಡುಗೆಯಾಗಿ ನೀಡಿದ ಧ್ವಜ ಸ್ತಂಭ ಕಟ್ಟೆ ಮತ್ತು ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣ ಅಲೆಕ್ಕಾಡಿಯವರು ಕೊಡುಗೆಯಾಗಿ ನೀಡಿದ ಲಾಂಛನವನ್ನು ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪರವರು ಅನಾವರಣ ಗೊಳಿಸಿದರು.

ಆಟಿದ ಕೂಟ ಉದ್ಘಾಟನೆ
ಬೆಳಿಗ್ಗೆ ನಡೆದ ಆಟಿದ ಕೂಟ ಕಾರ್ಯಕ್ರಮವನ್ನು ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಅಚಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಏಲಡ್ಕ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರರಾದ ರೋಹಿತ್ ಗೌಡ ಅನಿಲ, ವಸಂತ ಗೌಡ ಕಂಪ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ವರ ಅನಿಲ, ಉಪಾಧ್ಯಕ್ಷೆ ಯಶೋಧ ನೇರೋಳ್ತಡ್ಕ, ಮುಖ್ಯಗುರು ಬಾಲಕೃಷ್ಣ ಅಲೆಕ್ಕಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸೇವಾದೀಕ್ಷಿತೆ ನಳಿನಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಅನಿಲ, ಕೋಶಾಧಿಕಾರಿ ರಾಜೇಶ್ ಮೀಜೆ ಉಪಸ್ಥಿತರಿದ್ದರು. ಪದ್ಮಯ್ಯ ಗೌಡ ಅನಿಲ ಸ್ವಾಗತಿಸಿ, ಧರ್ಮೇಂದ್ರ ಕಟ್ಟತ್ತಾರು ವಂದಿಸಿದರು. ದೇವಕಿ ಕಟ್ಟತ್ತಾರು ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆ:
ಆಟಿ ಕೂಟ ಕಾರ್ಯಕ್ರಮದ ವಿಶೇಷವಾಗಿ ಚಟ್ನಿ, ಸೊಪ್ಪು ಪಲ್ಯ, ತಿಂಡಿ ತಿನಸುಗಳ ಸ್ಪರ್ಧೆ ,ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಫನ್ನಿ ಗೇಮ್ಸ್, ಚೆನ್ನೆ ಆಟ, ಎಕ್ಕಡಿ ಆಟ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪತ್ರೊಡೆ ಪಾನಗ , ತುಳುನಾಡ ಸಾಂಪ್ರದಾಯಿಕ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಲಕ್ಕಿ ಕೂಪನ್ ಸ್ಪರ್ಧೆ ನಡೆಯಿತು.

LEAVE A REPLY

Please enter your comment!
Please enter your name here