ಪಡುಮಲೆ ಮರಾಟಿ ಸಮಾಜ ಸೇವಾ ಸಂಘ ವಾರ್ಷಿಕ ಮಹಾಸಭೆ, ಆಟಿ ಐಸಿರಿ, ವನಮಹೋತ್ಸವ, ಸನ್ಮಾನ ಕಾರ್ಯಕ್ರಮ

0

ಬಡಗನ್ನೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಇದರ ವಾರ್ಷಿಕ ಮಹಾಸಭೆ, ಆಟಿ ಐಸಿರಿ,ಮತ್ತು ವನಮಹೋತ್ಸವ,ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವು ಆ.3 ರಂದು ದೇವಪ್ಪ ನಾಯ್ಕ ಚಂದುಕೂಡ್ಲು ಇವರ ಮನೆಯಲ್ಲಿ  ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಕೊಂಬೆಟ್ಟು ಮಾತೃ ಸಂಘ ಮರಾಟಿ ಸಮಾಜ ಸೇವಾ ಸಂಘ  ಅಧ್ಯಕ್ಷ ಕರುಣಾಕರ ನಾಯ್ಕ ಅಲೆಟ್ಟಿ ಪಾಂಗಳಾಯಿ ಉದ್ಘಾಟಿಸಿ ಮಾತನಾಡಿ, ಪಡುಮಲೆ ಮರಾಟಿ ಸಮಾಜ ಸೇವಾ ಸಂಘ ವಿವಿಧ ವಿಶಿಷ್ಟ ಕಾರ್ಯಕ್ರಮಗಳನ್ನು ಉತ್ತಮ ಹೆಜ್ಜೆ ಇಡುತ್ತದೆ. ದಿ. ವೖೆ. ಕೆ ನಾಯ್ಕ ಪಟ್ಟೆ ಇವರು ಗ್ರಾಮದ ಸಮಾಜ ಬಾಂಧವರನ್ನು ಒಟ್ಟು ಗೂಡಿಸಿಕೊಂಡು ವಠಾರ ಸಮಿತಿ ರಚನೆ ಮಾಡುವ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸಿ ಇಂದು ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿದೆ. ದುರದೃಷ್ಟಕರ ಅವರು ನಮ್ಮನ್ನು ಅಗಲಿ ದೇವರ ಪಾದ ಸೇರಿದ್ದಾರೆ. ಸಮಾಜದ ಉನ್ನತಿಯ  ಚಿಂತನೆಗಳು, ಕಾರ್ಯಗಳು ಅನುಷ್ಠಾನ ಪಡಿಸಿದಾಗ ಅವರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆ ಎಂದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ ರಾಮಣ್ಣ ನಾಯ್ಕ:
ಪುತ್ತೂರು ಕೊಂಬೆಟ್ಟು ಮಾತೃ ಸಂಘ ಮರಾಟಿ ಸಮಾಜ ಸೇವಾ ಸಂಘ  ಕಾರ್ಯದರ್ಶಿ ರಾಮಣ್ಙ ನಾಯ್ಕ ಮಾತನಾಡಿ, ಆಚರಣೆ ಇದ್ದಲ್ಲಿ ಸಂಸ್ಕೃತಿ ಉಳಿಯುತ್ತದೆ.ಸಂಸ್ಕೃತಿ  ಇದ್ದಲ್ಲಿ ದೇಶದ ಗೌರವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಆಟಿ ಐಸಿರಿ ಕಾರ್ಯಕ್ರಮದ ಜತೆಗೆ ಮಕ್ಕಳಿಗೂ ಉತ್ತಮ ಸಂಸ್ಕಾರ ,ಸಂಸ್ಕೃತಿ ಮತ್ತು ಉತ್ತಮ ಶಿಕ್ಷಣ ಬೆಳೆಸುವಂತೆ ಹೇಳಿದರು.

ಸಂಘಟನೆಯೇ ಶಕ್ತಿ : ಮೀನಾಕ್ಷಿ ಮಂಜುನಾಥ
ಕೊಂಬೆಟ್ಟು ಮಹಿಳಾ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಮಾತನಾಡಿ, ಪಡುಮಲೆ ಮರಾಟಿ ಸಮಾಜ ಸೇವಾ ಸಂಘ ಕ್ರಿಯಾಶೀಲ ಗ್ರಾಮ ಸಮಿತಿ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರನ್ನು ಗೌವವಿಸುತ್ತಾರೆ. ಇದು ಒಂದು ಸಂಘಟನೆಯ ಶಕ್ತಿಯಾಗಿದೆ. ಒಟ್ಟಾಗಿ ಸೇರುತ್ತಿರುವುದು ಅತ್ಯಂತ ಖುಷಿ ತಂದಿದೆ. ಹಿಂದಿನ ಕಾಲದಲ್ಲಿ ಹಿರಿಯರು ಕಷ್ಟದ ದಿನಗಳಲ್ಲಿ ಬಾಳಿ ಬದುಕಿದ್ದಾರೆ. ಪ್ರಕೃತಿಯಿಂದ ಸಿಗುತ್ತಿರುವ ಆಹಾರ ಸೇವನೆ ಮಾಡಿಕೊಂಡು ಬಲಾಡ್ಯವಾಗಿ, ಆರೋಗ್ಯವಂತರಾಗಿ ಜೀವನ ಮಾಡುತ್ತಿದ್ದರು. ಈಗ ಅನ್ನದ ಕೊರತೆ ಇಲ್ಲ ಸರಕಾರ ಬೇಕಾದಷ್ಟು ಅಕ್ಕಿ ನೀಡುತ್ತದೆ. ಆಗಿನ ಕಾಲದಲ್ಲಿ ಒಂದು ತುತ್ತು ಅನ್ನಕ್ಕೂ ಕಷ್ಟಪಡುವ ಕಾಲ. ಹಿಂದೆ ಅಟಿ ತಿಂಗಳ ಮೊದಲು ಬೇಸಾಯ ಮುಗಿಸಿಕೊಂಡು ವಿರಾಮದ ಈ ಒಂದು ತಿಂಗಳಲ್ಲಿ ಮನೊರಂಜನೆಗಾಗಿ ಚೆನ್ನೆಮನೆ ಆಟವಾಡುತ್ತ ಸಂತೋಷದಲ್ಲಿ ಜೀವನ ಮಾಡುತ್ತಿದ್ದರು ಎಂದು ಹೇಳಿದರು.

ವನಮಹೋತ್ಸವ ಆಚರಣೆ
ಮಂಗಳೂರು ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣ ನಾಯ್ಕ ಮುಡಿಪಿನಡ್ಕ  ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೋಷಕರು ಮಕ್ಶಳಿಗೆ ಉತ್ತಮ ಶಿಕ್ಷಣ ನೀಡಿ ಪ್ರತಿಭೆ ಅನಾವರಣ ಪ್ರೋತ್ಸಾಹ ನೀಡಬೇಕು. ಮತ್ತು ವನಮಹೋತ್ಸವ ಪ್ರಯುಕ್ತ ಪ್ರತಿ ಮನೆಯಲ್ಲೂ ಒಂದೊಂದು ಸಸಿ ನೆಟ್ಟು ಬೆಳೆಸಬೇಕು ಎಂದು ಹೇಳಿ ಶುಭ  ಹಾರೖೆಸಿದರು.

ಪುತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆ ಆಧ್ಯಕ್ಷ ವಸಂತ ನಾಯ್ಕ ಆರ್ಯಾಪು ಮಾತನಾಡಿ, ಶುಭ ಹಾರೖೆಸಿದರು.ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ಮಾತನಾಡಿ, ದಿ. ವೖೆ. ಕೃಷ್ಣ ನಾಯ್ಕ ಪಟ್ಟೆ ಇವರು ಸ್ಥಾಪಕ ಅಧ್ಯಕ್ಷರಾಗಿದ್ದುಕೊಂಡು ಗ್ರಾಮದ ಸಮಾಜ ಬಾಂಧವರನ್ನು ಒಟ್ಟುಗೂಡಿಸಿಕೊಂಡು ವಠಾರ ಸಮಿತಿ ರಚನೆ ಮಾಡುವ ಮೂಲಕ ಸಂಘಟನೆಯನ್ನು ಬೆಳೆಸಿ ಇಂದು ಹತ್ತರ ಸಂಭ್ರಮಾಚರಣೆಯಲ್ದಿದ್ದೇವೆ. ಶ್ರೀಯುತರಿಗೆ ಆದರ್ಶರಾಗಿದ್ದುಕೊಂಡು  ಅವರ ಚಿಂತನೆ ಸಮಾಜಮುಖಿ ಕಾರ್ಯಕ್ರಮವನ್ನು ಮಾಡುವ ಮೂಲಕ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ ಮುಂದೆ ನಡೆಯುವ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಸಹಕರಿಸುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಕೊಂಬೆಟ್ಟು ಮಾತೃಸಂಘ ಮರಾಟಿ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗ್ರು, ಸದಸ್ಯರಾದ ಪೂವಪ್ಪ ನಾಯ್ಕ, ಬಾಲಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ,  ಪಡುಮಲೆ ಮರಾಟಿ ಸೇವಾ ಸಂಘದ  ಗೌರವಾಧ್ಯಕ್ಷೆ ಯಮುನಾ ವೖೆ. ಕೆ ನಾಯ್ಕ ಪಟ್ಟೆ, ವಠಾರ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮಾಜದ ಬಾಂಧವರು, ಭಾಗವಹಿಸಿದ್ದರು.

ಸಂಘದ  ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು ಪ್ರಾಸ್ತಾವಿಕ ಮಾತನಾಡಿದರು.ಸದಸ್ಯ ಗೋಪಾಲ ನಾಯ್ಕ ದೊಡ್ಡಡ್ಕ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಕೇಶವಪ್ರಸಾದ್ ನೀಲಗಿರಿ ವಂದಿಸಿದರು. ಜತೆ ಕಾರ್ಯದರ್ಶಿ ಕುಸುಮ ವರಧಿ ಮಂಡಿಸಿದರು. ಕಾವ್ಯ ಸಿ. ಹೆಚ್ ಪ್ರಾರ್ಥಿಸಿದರು. ಸದಸ್ಯೆ ರೇಖಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಮಿಥುನ್ ರಾಜ್ ಸಹಕರಿಸಿದರು.

ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ
10ನೇ ತರಗತಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 85% ಮೇಲ್ಪಟ್ಟು ಡಿಸ್ಟಿಂಕ್ಷನ್ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ಅಂಗನವಾಡಿ ಹಿಡಿದು 10 ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು, ಪೆನ್ಸಿಲ್, ಹಾಗೂ ಫುಸ್ತಕ ವಿತರಣೆ .ವಿತರಣೆ ಮಾಡಲಾಯಿತು.

 ಸ್ಪರ್ಧೆಗಳು
ಕಾರ್ಯಕ್ರಮದ ಅಂಗವಾಗಿ  ಸಮಾಜದ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

 ಹಿರಿಯ ನಾಗರಿಕರಿಗೆ ಸನ್ಮಾನ
ಚೋಮ ನಾಯ್ಕ ಮತ್ತು ಲಕ್ಷ್ಮಿ ದಂಪತಿಗಳು ಚಂದುಕೂಡ್ಲು ಹಾಗೂ ಪದ್ಮಾವತಿ ನಾಯ್ಕ ದೊಡ್ಡಡ್ಕ ಮತ್ತು ಅಟಿಕೂಟ ಕಾರ್ಯಕ್ರಮ ಆಯೋಜಿಸಿದ ಮನೆಯವರಾದ ದೇವಪ್ಪ ನಾಯ್ಕ ಮತ್ತು ಜಯಂತಿ ದಂಪತಿಗಳು ಚಂದುಕೂಡ್ಲು ಇವರನ್ನು  ಮಾತೃ ಸಂಘದ  ಅಧ್ಯಕ್ಷ ಕರುಣಾಕರ ನಾಯ್ಕ ಅಲೆಟ್ಟಿ ಪಾಂಗಳಾಯಿ ಸಾಲು ಹೊದಿಸಿ ಫಲಪುಷ್ಪ ಹಾಗೂ  ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಆಟಿ ಕಳೆಂಜ ಕುಣಿತ 
ಊರಿನ ದೖೆವ ನರ್ತಕರಾದ ಮೋಹನ ಕುಕ್ಕುಪುಣಿ ರವರ ನೇತೃತ್ವದಲ್ಲಿ ಪ್ರತಿವರ್ಷ ಊರಿಗೆ ಬರುವ ಮಾರಿಯನ್ನು ದೂರಿಕರಿಸುವ ಸಂಪ್ರದಾಯ ಪರಂಪರೆಯಾಗಿ ಪಾಲಿಸಿಕೊಂಡು ಬರುತ್ತಿದ್ದು ಆಟಿ ಐಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here