ಉಪ್ಪಿನಂಗಡಿ: ಸಮಾಜದ ಅಭಿವೃದ್ಧಿಯ ಚಿಂತನೆಯನ್ನಿಟ್ಟುಕೊಂಡು ಬದುಕು ಸಾಗಿಸಿದವರು ದಿ. ವೈದ್ಯ ಕೆ. ಶೀನಪ್ಪ ಶೆಟ್ಟಿಯವರು. ಆದ್ದರಿಂದ ಅವರಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅನುಪಮ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ನ್ಯಾಯವಾದಿ ಮಹೇಶ್ ಕಜೆ ತಿಳಿಸಿದರು.
ಇತ್ತೀಚೆಗೆ ನಿಧನರಾದ ವೈದ್ಯ ಕೆ. ಶೀನಪ್ಪ ಶೆಟ್ಟಿಯವರ ಸದ್ಗತಿಯ ಬಗ್ಗೆ ಇಲ್ಲಿನ ಶ್ರೀ ಗುರು ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಉತ್ತರಕ್ರಿಯಾ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಹುಟ್ಟು ಮತ್ತು ಸಾವಿನ ಮಧ್ಯದ ಬದುಕಿನಲ್ಲಿ ಆದರ್ಶಗಳು ತುಂಬಿಕೊಂಡಿದ್ದಾಗ ಮಾತ್ರ ನೆನಪುಗಳು ಅಚ್ಚಳಿಯದೇ ಉಳಿಯಲು ಸಾಧ್ಯ. ಅಂತಹ ಆದರ್ಶದ ಬದುಕು ಶೀನಪ್ಪ ಶೆಟ್ಟಿಯವರದ್ದಾಗಿತ್ತು. 53ನೇ ವಯಸ್ಸಿನಲ್ಲಿ ಅವರಿಗೆ ಪತ್ನಿ ವಿಯೋಗವಾದಾಗ ತಂದೆ ಹಾಗೂ ತಾಯಿಯ ಜವಾಬ್ದಾರಿಯನ್ನೂ ತೆಗೆದುಕೊಂಡು ಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ತನ್ನ ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ ಸಂತಸ, ಸಂತೃಪ್ತಿಯ ಬದುಕು ಇವರದ್ದಾಗಿತ್ತು. ಇಂತಹ ಜೀವನ ಪಡೆಯುವ ಪುಣ್ಯ ಕೆಲವರದ್ದು ಮಾತ್ರ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಶ್ರೀಮತಿ ಶಕುಂತಳಾ ಶೆಟ್ಟಿ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಕೌಶಲ್ ಪ್ರಸಾದ್, ಡಾ. ರಾಜಾರಾಮ್ ಕೆ.ಬಿ., ಡಾ. ಕೆ.ಜಿ. ಭಟ್, ಡಾ. ನಿರಂಜನ್ ರೈ, ಡಾ. ಸುಪ್ರೀತ್ ಲೋಬೋ, ಕೆ. ರಾಧಾಕೃಷ್ಣ ನಾಯ್ಕ್, ಕೃಷ್ಣರಾವ್ ಆರ್ತಿಲ, ಚಂದ್ರಹಾಸ ಶೆಟ್ಟಿ, ದೇವಿದಾಸ್ ರೈ, ಗೋಪಾಲಕೃಷ್ಣ ರೈ, ಕರುಣಾಕರ ಸುವರ್ಣ, ಮುಹಮ್ಮದ್ ಅಲಿ ನೆಕ್ಕಿಲಾಡಿ, ಮುಹಮ್ಮದ್ ಸಲೀಂ ನೆಕ್ಕಿಲಾಡಿ, ಸಚಿನ್ ಉಪ್ಪಿನಂಗಡಿ, ಉಮಾನಾಥ ಶೆಟ್ಟಿ ಪೆರ್ನೆ, ಎನ್. ಉಮೇಶ ಶೆಣೈ, ಕೃಷ್ಣಪ್ಪ ಪೂಜಾರಿ, ಜತೀಂದ್ರ ಶೆಟ್ಟಿ ಅಲಿಮಾರ್, ರೂಪೇಶ್ ರೈ ಅಲಿಮಾರ್, ಸುಜಾತ ರೈ ಅಲಿಮಾರ್, ಅಜೀಝ್ ಬಸ್ತಿಕ್ಕಾರ್, ಅಶ್ರಫ್ ಬಸ್ತಿಕ್ಕಾರ್, ವಿಶ್ವನಾಥ ಶೆಟ್ಟಿ ಕಂಗ್ವೆ, ಪ್ರಶಾಂತ್ ಡಿಕೋಸ್ತ, ಗೋಪಾಲ ಶೆಟ್ಟಿ ಕಳೆಂಜ, ಐತಪ್ಪ ನಾಯ್ಕ, ಕಿಶೋರ್ ಪೆರ್ನಾಂಡಿಸ್, ಮುರಳೀ, ಪ್ರಮೋದ್ ರೈ, ನಿರಂಜನ ರೈ ಮಠಂತಬೆಟ್ಟು, ಅಸ್ಕರ್ ಅಲಿ, ಮನೋಜ್ ಶೆಟ್ಟಿ, ಶಯನಾ ಜಯಾನಂದ್, ಪುಷ್ಪಾವತಿ ಶೆಟ್ಟಿ ಮನವಳಿಕೆ ಗುತ್ತು, ಹರೀಶ್ಚಂದ್ರ, ಪುರುಷೋತ್ತಮ ಮುಂಗ್ಲಿಮನೆ, ಗಣೇಶ್ ಶೆಣೈ ಹಾಗೂ ಕೆ. ಶೀನಪ್ಪ ಶೆಟ್ಟಿಯವರ ಮಕ್ಕಳಾದ ವಿಜಯಲಕ್ಷ್ಮೀ ಬಿ. ರೈ, ಡಾ. ಕೆ. ಯತೀಶ್ ಕುಮಾರ್ ಶೆಟ್ಟಿ, ಹೇಮಲತಾ ಬಿ. ಶೆಟ್ಟಿ, ಕೆ. ಜಗದೀಶ ಶೆಟ್ಟಿ, ಅಳಿಯಂದಿರಾದ ಕೆ. ಬಾಲಕೃಷ್ಣ ರೈ, ಕೆ. ಬಾಲಕೃಷ್ಣ ಶೆಟ್ಟಿ, ಸೊಸೆಯಂದಿರಾದ ಶಮ್ಮಿ ವೈ. ಶೆಟ್ಟಿ, ಪ್ರಪುಲ್ಲಾ ಜೆ. ಶೆಟ್ಟಿ ಹಾಗೂ ಅವರ ಬಂಧು- ಮಿತ್ರರು ಭಾಗವಹಿಸಿದ್ದರು. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಕಾರ್ಯಕ್ರಮ ನಿರೂಪಿಸಿದರು.