ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಡಿಪಾಡಿ ಒಕ್ಕೂಟದ ಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷ ದಿನೇಶ್ ಗೋಮುಖ ಇವರ ಅಧ್ಯಕ್ಷತೆಯಲ್ಲಿ ಆ.3ರಂದು ಕುಡಿಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷ ದಿನೇಶ್ ಗೌಡ ಗೋಮುಖ, ಉಪಾಧ್ಯಕ್ಷ ಎನ್.ರಾಧಾಕೃಷ್ಣ ಗೌಡ, ಸೇವಾಪ್ರತಿನಿಧಿ ಚಿತ್ರಾರವರು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಪುತ್ತುಬ್ಯಾರಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಸುನೀತಾ ನಿರೂಪಿಸಿದರು. ಸಭೆಯ ಜವಾಬ್ದಾರಿಯನ್ನು ಪಂಚಾಶ್ರೀ ತಂಡದವರು ವಹಿಸಿಕೊಂಡಿದ್ದರು.