ಕಡಬ ಪಟ್ಟಣ ಪಂಚಾಯತ್ ಚುನಾವಣೆ-22 ನಾಮಪತ್ರ ಸಲ್ಲಿಕೆ

0

ಬಿಜೆಪಿ-13 , ಕಾಂಗ್ರೆಸ್‌ -5 ,ಎಸ್‌ ಡಿ.ಪಿ.ಐ -3 , ಎ.ಎ.ಪಿ -1

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡ್‌ಗಳಿಗೆ ಆ.17ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.5 ಕಡೆಯ ದಿನವಾಗಿದ್ದು, ಆ.4ರಂದು ಒಟ್ಟು 22 ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಪಕ್ಷದ 13 ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ 5 ಅಭ್ಯರ್ಥಿಗಳು, ಮೂವರು ಎಸ್.ಡಿ.ಪಿ.ಐ. ಅಭ್ಯರ್ಥಿಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.


ಕಳಾರ 1ನೇ ವಾರ್ಡಿನ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಬಿಜೆಪಿಯಿಂದ ಪ್ರೇಮ, ಎಸ್.ಡಿ.ಪಿ.ಐ.ಯಿಂದ ಸಮೀರಾ ಹಾರಿಸ್, ವಾರ್ಡ್ ಸಂಖ್ಯೆ 2 ಕೋಡಿಬೈಲು ಪ.ಜಾ.ಮಹಿಳೆ ಮೀಸಲು ಸ್ಥಾನಕ್ಕೆ ಬಿಜೆಪಿಯಿಂದ ಕುಸುಮಾ ಅಂಗಡಿಮನೆ, ಕಾಂಗ್ರೆಸ್‌ನಿಂದ ಮೋಹಿನಿ ಹಾಗೂ ಕಮಲಾಕ್ಷಿ, ಆಮ್ ಆದ್ಮಿ ಪಾರ್ಟಿಯಿಂದ ಸುಶೀಲ, ವಾರ್ಡ್ ಸಂಖ್ಯೆ 3. ಪನ್ಯ ಸಾಮಾನ್ಯ ಸ್ಥಾನಕ್ಕೆ ಬಿಜೆಪಿಯಿಂದ ಆದಂ ಕುಂಡೋಳಿ, ಎಸ್.ಡಿ.ಪಿ.ಐ.ಯಿಂದ ಹಾರಿಸ್ ಕಳಾರ, ವಾರ್ಡ್ ಸಂಖ್ಯೆ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಬಿಜೆಪಿಯಿಂದ ಅಶೋಕ್ ಕುಮಾರ್ ಪಿ, ವಾರ್ಡ್ ಸಂಖ್ಯೆ 5 ಮಾಲೇಶ್ವರ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿಯಿಂದ ಪ್ರಕಾಶ್ ಎನ್.ಕೆ, ಕಾಂಗ್ರೆಸ್‌ನಿಂದ ಕೆ.ಎಂ. ಹನೀಫ್, ವಾರ್ಡ್ ಸಂಖ್ಯೆ 6 ಕಡಬ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯಿಂದ ಪ್ರೇಮ, ಎಸ್.ಡಿ.ಪಿ.ಐ.ಯಿಂದ ಸ್ಟಾಲಿಯತ್ ಜಸೀರ, ವಾರ್ಡ್ ಸಂಖ್ಯೆ 7 ಪಣೆಮಜಲು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಬಿಜೆಪಿಯಿಂದ ಗಣೇಶ, ವಾರ್ಡ್ ಸಂಖ್ಯೆ 8 ಪಿಜಕ್ಕಳ ಸಾಮಾನ್ಯ ಸ್ಥಾನಕ್ಕೆ ಬಿಜೆಪಿಯಿಂದ ದಯಾನಂದ ಪಿ. ಕಾಂಗ್ರೆಸ್‌ನಿಂದ ಅಶ್ರಫ್ ಶೇಡಿಗುಂಡಿ, ವಾರ್ಡ್ ಸಂಖ್ಯೆ 9 ಮೂರಾಜೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ, ವಾರ್ಡ್ ಸಂಖ್ಯೆ 10 ದೊಡ್ಡ ಕೊಪ್ಪ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯಿಂದ ಗುಣವತಿ ರಘುರಾಮ, ವಾರ್ಡ್ ಸಂಖ್ಯೆ 11 ಕೋಡಿಂಬಾಳ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯಿಂದ ಅಕ್ಷತಾ, ಕಾಂಗ್ರೆಸ್‌ನಿಂದ ಜ್ಯೋತಿ ಗೌಡ ಡಿ ಕೋಲ್ಪೆ, ವಾರ್ಡ್ ಸಂಖ್ಯೆ 12. ಮಜ್ಜಾರು ಪರಿಶಿಷ್ಠ ಜಾತಿ ಸ್ಥಾನಕ್ಕೆ ಬಿಜೆಪಿಯಿಂದ ಮೋಹನ, ವಾರ್ಡ್ ಸಂಖ್ಯೆ 13 ಪುಳ್ಳಿಕುಕ್ಕು ಪರಿಶಿಷ್ಠ ಪಂಗಡ ಸ್ಥಾನಕ್ಕೆ ಬಿಜೆಪಿಯಿಂದ ಸದಾನಂದ ನಾಯ್ಕ್ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿಗಳಾಗಿ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್ ಅವರುಗಳು ನಾಮಪತ್ರ ಸ್ವೀಕರಿಸಿದರು. ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜತೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here