ಕಡಬ ಪಟ್ಟಣ ಪಂಚಾಯತ್ ಚುನಾವಣೆ : 13 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 13 ವಾರ್ಡ್‌ಗಳಿಗೂ ಆ.4ರಂದು ಅಭ್ಯರ್ಥಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಅವರು ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.


ಪಟ್ಟಣ ಪಂಚಾಯತ್‌ನ ಕಳಾರ 1ನೇ ವಾರ್ಡಿನ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ತಮನ್ನಾಜಬೀನ್, ವಾರ್ಡ್ ಸಂಖ್ಯೆ 2 ಕೋಡಿಬೈಲು ಪ.ಜಾ.ಮಹಿಳೆ ಮೀಸಲು ಸ್ಥಾನಕ್ಕೆ ಮೋಹಿನಿ, ವಾರ್ಡ್ ಸಂಖ್ಯೆ 3. ಪನ್ಯ ಸಾಮಾನ್ಯ ಸ್ಥಾನಕ್ಕೆ ಮೊಹಮ್ಮದ್ ಪೈಝಲ್, ವಾರ್ಡ್ ಸಂಖ್ಯೆ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಸಿ.ಜೆ.ಸೈಮನ್, ವಾರ್ಡ್ ಸಂಖ್ಯೆ 5 ಮಾಲೇಶ್ವರ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕೆ.ಎಂ. ಹನೀಫ್, ವಾರ್ಡ್ ಸಂಖ್ಯೆ 6 ಕಡಬ ಸಾಮಾನ್ಯ ಮಹಿಳೆ ಸ್ಥಾನಕ್ಕೆ ನೀಲಾವತಿ ಶಿವರಾಮ್ ಗೌಡ, ವಾರ್ಡ್ ಸಂಖ್ಯೆ 7 ಪಣೆಮಜಲು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ರೋಹಿತ್ ಗೌಡ, ವಾರ್ಡ್ ಸಂಖ್ಯೆ 8 ಪಿಜಕ್ಕಳ ಸಾಮಾನ್ಯ ಸ್ಥಾನಕ್ಕೆ ಅಶ್ರಫ್ ಶೇಡಿಗುಂಡಿ, ವಾರ್ಡ್ ಸಂಖ್ಯೆ 9 ಮೂರಾಜೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕೃಷ್ಣಪ್ಪ ಪೂಜಾರಿ, ವಾರ್ಡ್ ಸಂಖ್ಯೆ 10 ದೊಡ್ಡ ಕೊಪ್ಪ ಸಾಮಾನ್ಯ ಮಹಿಳೆ ಸ್ಥಾನಕ್ಕೆ ತುಳಸಿ ಗಣೇಶ್ ಗೌಡ, ವಾರ್ಡ್ ಸಂಖ್ಯೆ 11 ಕೋಡಿಂಬಾಳ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಜ್ಯೋತಿ ಗೌಡ ಡಿ ಕೋಲ್ಪೆ, ವಾರ್ಡ್ ಸಂಖ್ಯೆ 12. ಮಜ್ಜಾರು ಪರಿಶಿಷ್ಠ ಜಾತಿ ಮೀಸಲು ಸ್ಥಾನಕ್ಕೆ ಉಮೇಶ್ ಮಡ್ಯಡ್ಕ ಹಾಗೂ ವಾರ್ಡ್ ಸಂಖ್ಯೆ 13 ಪುಳ್ಳಿಕುಕ್ಕು ಪರಿಶಿಷ್ಠ ಪಂಗಡ ಸ್ಥಾನಕ್ಕೆ ಕೃಷ್ಣಪ್ಪ ನಾಯ್ಕ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here