ಪುತ್ತೂರು: ಸಂತ ಫಿಲೋಮಿನಾ ವಿದ್ಯಾಸಂಸ್ಥೆ ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಫಿಲೋಮಿನಾ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ನಡೆಯುವ 43ನೇ ವರ್ಷದ ಗಣೇಶೋತ್ಸವ ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರಗಿದ್ದು, ಆ.9 ರಂದು ವಿದ್ಯಾರ್ಥಿ ಮಿತ್ರರಿಂದ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವು ರೋಟರಿ ಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ನೆರವೇರಲಿದೆ.
ಸಾಮಾಜಿಕ ಕಾರ್ಯಕ್ರಮದಡಿಯಲ್ಲಿ ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಕಳೆದ 42 ವರ್ಷಗಳಿಂದ ಯಶಸ್ವಿಯಾಗಿ ರಕ್ತದಾನ ಶಿಬಿರವು ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಭಾಗವಹಿಸಲಿರುವರು ಎಂದು ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನ್ವೇಶ್ ರೈ, ಕಾರ್ಯದರ್ಶಿ ಸೂರಜ್ ನಂದ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರ್ಬೆಯಲ್ಲಿ ರಾರಾಜಿಸುತ್ತಿದೆ 60 ಫೀಟ್ ಎತ್ತರದ ಭಗವಾಧ್ವಜ..
ವಿನಾಯಕನಗರದಲ್ಲಿ ಎರಡು ದಿನಗಳ ಕಾಲ ವರ್ಷಂಪ್ರತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ವರ್ಷ ದರ್ಬೆ ವಿನಾಯಕನಗರದಲ್ಲಿ 60 ಫೀಟ್ ಎತ್ತರದ ಬೃಹತ್ ಓಂ ಭಗವಾಧ್ವಜ ರಾರಾಜಿಸುತ್ತಿದ್ದು ಇದು ರಾಜ್ಯದಲ್ಲಿ ಪ್ರಥಮ ಎಂಬಂತೆ ಗೋಚರಿಸಿದೆ.