(ಆ.23) ಬೆಂದ್ರ್‌ ತೀರ್ಥ ಇರ್ದೆಯಲ್ಲಿ ತೀರ್ಥ ಅಮಾವಾಸ್ಯೆಯ ಪ್ರಯುಕ್ತ ಪುಣ್ಯ ತೀರ್ಥಸ್ನಾನ

0

ಪುತ್ತೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಪುಟ್ಟ ಗ್ರಾಮ ಇರ್ದೆಯಲ್ಲಿ ಇದೊಂದು ಪ್ರಕೃತಿ ಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ.

ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು, ಸ್ಥಳೀಯವಾಗಿ ಸಾಕಷ್ಟು ಜನರಿಂದ ಮತ್ತು ಹೊಸದಾಗಿ ವಿವಾಹ ಆದವರು ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.

ಈ ಬಿಸಿ ನೀರಿನ ಚಿಲುಮೆ ದಕ್ಷಿಣ ಭಾರತದ ವಿಸ್ಮಯವೆಂದೇ ಹೇಳಬಹುದು. ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಸಂಸ್ಥೆಯು ಇದನ್ನು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಕರೆಯಲ್ಪಟ್ಟಿದೆ. ಪ್ರತೀ ವರ್ಷದ ತೀರ್ಥ ಅಮಾವಾಸ್ಯೆ ದಿನ ಅಂದರೆ ಈ ಬಾರಿ ಆಗಸ್ಟ್ 23 ರ ಶನಿವಾರ ಪುಣ್ಯ ತೀರ್ಥ ಸ್ನಾನ ನಡೆಯಲಿದೆ.

ಸಾಮಾನ್ಯವಾಗಿ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಹಿಮಾಲಯ ಪರ್ವತಗಳಿಗೆ ಸನ್ನಿಹಿತವಾದ ಪ್ರದೇಶಗಳಲ್ಲಿ ಗಂಧಕಾಂಶವಿರುವ ಹಾಗೂ ಕುದಿಯುವ ಬಿಸಿ ನೀರಿನ ಚಿಲುಮೆಗಳನ್ನು ಅಥವಾ ಬುಗ್ಗೆಗಳನ್ನು ಕಾಣಬಹುದು. ಆದರೆ ಈ ರೀತಿಯ ವಿಸ್ಮಯಗಳು ದಕ್ಷಿಣ ಭಾರತದಲ್ಲಿ ಬಲು ಅಪರೂಪ ಹಾಗೂ ಬಹು ವಿರಳವೆಂದೆ ಹೇಳಬಹುದು.

LEAVE A REPLY

Please enter your comment!
Please enter your name here