ಸವಣೂರಿನಲ್ಲಿ ಓಡಿಯೂರು ಶ್ರೀ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ 64ನೇ ಜನ್ಮ ದಿನೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸವಣೂರು ವಲಯ , ಒಡಿಯೂರು ಸ್ವ ಸಹಾಯ ಸಂಘಗಳ ಘಟ ಸಮಿತಿ ಸವಣೂರು, ಗ್ರಾಮ ಪಂಚಾಯತ್ ಸವಣೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸವಣೂರು, ಸವಣೂರು ಯುವಕ ಮಂಡಲ ಇವರ ಜಂಟಿ ಸಹಯೋಗದಲ್ಲಿ ಆ. 3 ರಂದು ಸವಣೂರು ವಿದ್ಯಾರಶ್ಮಿ ಬಸ್ ನಿಲ್ದಾಣದಿಂದ ವಿಷ್ಣುಪುರ ಬಸ್ ನಿಲ್ದಾಣದವರೆಗೆ ಸ್ವಚ್ಚತೆ ನಡೆಯಿತು.

ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಹುಲ್ಲು ಕತ್ತರಿಸುವ ಯಂತ್ರವನ್ನು ಸವಣೂರು ಘಟ ಸಮಿತಿ ಸಂಘಟನಾ ಕಾರ್ಯದರ್ಶಿ ಶ್ರೀ ಉಮೇಶ್ ಬೇರಿಕೆ ಕುಮಾರಮಂಗಲ ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ್ ಕಾಯರ್ಗ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕೋಡಿ ಬೈಲ್, ಸವಣೂರು ಪಂಚಾಯತ್ ಸದಸ್ಯ ಗಿರಿ ಶಂಕರ್ ಸುಲಾಯ, ರಫೀಕ್ , ಅಬ್ದುಲ್ ರಜಾಕ್, ರಾಮಕೃಷ್ಣ ಪ್ರಭು, ಕೀರ್ತನ್ ಕೋಡಿ ಬೈಲ್, ರಾಮಚಂದ್ರ ಕೊಳಂಬೇತಡ್ಕ , ಸತೀಶ್ ಬಲ್ಯಾಯ ಸುರೇಶ್ ರೈ ಸೂಡಿ ಮುಳ್ಳು, ಗಂಗಾಧರ ಪೆರಿಯಡ್ಕ ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ತಾಲ್ಲೂಕು ಮೇಲ್ವಿಚಾರಕಿ ಕಾವ್ಯ ಲಕ್ಷ್ಮೀ, ಸಂಯೋಜಕಿ ವೇದಾವತಿ, ಸೇವಾ ದೀಕ್ಷಿತೆ, ಹರಿಣಾಕ್ಷಿ ಸವಣೂರು ಘಟ ಸಮಿತಿ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷ ಪುಟ್ಟಣ್ಣ ಪರಣೆ, ಕಾರ್ಯದರ್ಶಿ ಅಕ್ಷತಾ, ಜೊತೆ ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here