ಪುತ್ತೂರು:ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ 2025-26 ಸಾಲಿನ ಮುಂಗಾರು ಹಂಗಾಮಿನಡಿ ಜು.31ರಂದು ಅಂತಿಮ ದಿನಾಂಕವಾಗಿದ್ದ ವಿವಿಧ ಜಿಲ್ಲೆಗಳ ಎಲ್ಲಾ ಅಧಿಸೂಚಿತ ಬೆಳೆಗೆ ರೈತರ ನೋಂದಣಿಯ ಅಂತಿಮ ದಿನಾಂಕವನ್ನು ಸಾಲ ಪಡೆಯದ ರೈತರಿಗೆ ಆ.14 ಮತ್ತು ಸಾಲ ಪಡೆದ ರೈತರಿಗೆ ಆ.30ರವರೆಗೆ ವಿಸ್ತರಿಸಿ ಸರಕಾರ ಆದೇಶಿಸಿದೆ.
ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‌ಗಳಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಬ್ಯಾಂಕ್‌ಗಳಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಬಹುದಾಗಿರುತ್ತದೆ ಹಾಗೂ ಸಾಮಾನ್ಯ ಸೇವಾ ಕೇಂದ್ರ (cSc)ಮತ್ತು ಗ್ರಾಮ ಒನ್ ಗಳ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೇರಿಗೆ ಕ್ರಮವಾಗಿ ರೂ.6400/- ಹಾಗೂ ರೂ.2350/-ಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ TATA AIG ಸಂಸ್ಥೆಯು ಆಯ್ಕೆಯಾಗಿದೆ.
ಈವರೆಗೆ ಯೋಜನೆಯಡಿ ನೋಂದಾವಣೆಗೊಳ್ಳದ ರೈತರು ತುರ್ತಾಗಿ ಸದರಿ ಯೋಜನೆಯಡಿ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಯಡಿ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿಧಿ ಶುಭಂ ΤΑΤΑ 9131962255, ಅಥವಾ ತೋಟಗಾರಿಕೆ ಇಲಾಖಾಧಿಕಾರಿಗಳಾದ ಮಂಜುನಾಥ ಡಿ.. ತೋಟಗಾರಿಕೆ ಉಪನಿರ್ದೇಶಕರು, ದಕ್ಷಿಣ ಕನ್ನಡ- 9448999226, ಪ್ರವೀಣ ಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮಂಗಳೂರು -9449258204, ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುತ್ತೂರು-9731854527 ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಳ್ಯದವರು ಪ್ರಮೋದ್ ಸಿಎಂ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು-ಮೊ: 9945303149, ಬೆಳ್ತಂಗಡಿಯವರು ಚಂದ್ರಶೇಖರ್ ಕೆ.ಎಸ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬೆಳ್ತಂಗಡಿ-9448336863 ಅವರನ್ನು ಸಂಪರ್ಕಿಸಬಹುದು.