ಪುತ್ತೂರು: ಬಂಟರ ಸಂಘ ಕುಳ ಕುಂಡಡ್ಕ, ವಿಟ್ಲ ಮೂಡ್ನೂರು, ಕುಳ ಇಡ್ಕಿದು ಗ್ರಾಮ ವ್ಯಾಪ್ತಿಗೆ ಒಳಪಟ್ಟು ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ 75% ಕ್ಕಿಂತ ಅಧಿಕ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹರೀಶ್ ಶೆಟ್ಟಿ ಕೊಳಂಬೆ ಹಾಗೂ ಸುಜಾತ ದಂಪತಿಗಳ ಮಗಳು ಆತ್ಮಿ ಶೆಟ್ಟಿ, ರವೀಂದ್ರ ಮೇಲಂಟ ಕಲ್ಲಂದಡ್ಕ ಹಾಗೂ ತಾರುಣ್ಯ ದಂಪತಿಗಳ ಮಗಳು ಗೌತಮಿ ಶೆಟ್ಟಿ, ಸತೀಶ್ ಶೆಟ್ಟಿ ಮೂಡೈಮಾರ್ ಹಾಗೂ ಪುಷ್ಪ ಶೆಟ್ಟಿ ದಂಪತಿಗಳ ಮಗಳು ಪ್ರಣತಿ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ ಹಾಗೂ ಲತಾ ಮೂಡೈಮಾರ್ ದಂಪತಿಗಳ ಮಗ ಸಂಕೇತ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಪಿಲಿಂಜ ಹಾಗೂ ಸಾರಿಕಾ ಶೆಟ್ಟಿ ದಂಪತಿಗಳ ಮಗಳು ಸಾನ್ವಿ ಶೆಟ್ಟಿ, ಜಯರಾಮ್ ಶೆಟ್ಟಿ ಸೇನರೇ ಮಜಲು ಹಾಗೂ ಮೀನಾಕ್ಷಿ ದಂಪತಿಗಳ ಮಗ ಜಿತೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಜ್ರೆಮಾರ್ ಹಾಗೂ ಗೀತಾ ದಂಪತಿಗಳ ಮಗ ಶ್ರೀರಾಜ್ ಶೆಟ್ಟಿ. ಏಳು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.