ಪುತ್ತೂರು: ಮನುಜ ರಂಗ ಟ್ರಸ್ಟ್ ಆಯೋಜನೆಯಲ್ಲಿ ಸಾಯಿ ಕಲಾ ಯಕ್ಷ ಬಳಗ ಬಾಲವನ ಪುತ್ತೂರು ಇವರಿಂದ ಮೈಸೂರು ಕೃಷ್ಣನಗರ ನಟನಾ ರಂಗಮಂದಿರದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ಆ.3ರಂದು ನಡೆಯಿತು.

ವಿಶೇಷ ಆಹ್ವಾನಿತರಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಿಕೆ ಆಂಡ್ ಕೆಐಎಸ್‌ಓ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್ (ಬಾಬು), ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಖ್ಯಾತ ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್ ಉಪಸ್ಥಿತರಿದ್ದರು.

ಹಿಮ್ಮೇಳದಲ್ಲಿ ಭಾಗವತರಾಗಿ ಹೇಮಸ್ವಾತಿ ಕುರಿಯಾಜೆ, ರಚನಾ ಚಿದ್ಗಲ್, ಸಿಂಚನ ಮೂಡುಕೋಡಿ, ಚಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಹರಿಪ್ರಸಾದ್ ಇಚ್ಲಂಪಾಡಿ, ಶರಣ್ಯ ನೆತ್ತೆರ್ಕೆರೆ, ದೇವಿಕಾ ಕುರಿಯಾಜೆ, ಕೃಷ್ಣ ಚೈತನ್ಯ, ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ಸುಳ್ಯ ಸಹಕರಿಸಿದರು.

ಮುಮ್ಮೇಳದಲ್ಲಿ ಪ್ರೇಮ ಕಿಶೋರ್, ಡಾ.ಅನನ್ಯ ಲಕ್ಷ್ಮಿ ಸಂದೀಪ್, ಜ್ಯೋತಿ ಅಶೋಕ್ ಕೆದಿಲ, ಡಾ. ವೀಣಾ ಎಸ್ ಸುಳ್ಯ, ಶ್ರುತಿ ವಿಸ್ಮಿತ್ ಬಲ್ನಾಡು, ಪುಷ್ಪ ಪ್ರಭಾಕರ್ ಕುಕ್ಕಾಜೆ, ರೇಣುಕಾ ಚೇತನ್, ಭವಿಷ್ ಭಂಡಾರಿ, ಪ್ರಿಯ ಉಬರಡ್ಕ, ದೇವಿಕಾ ಕುರಿಯಾಜೆ, ಪ್ರಸಕ್ತ ರೈ, ಮೋನಿಷಾ, ಚೈತಾಲಿ ಕಾಂಚೋಡು, ನಂದಿತ ವಿಟ್ಲ, ಉನ್ನತಿ ಮೂಡುಕೋಡಿ, ಸಂಜನ ಮೂಡುಕೋಡಿ, ನಯನ ಕುಂಜೂರು ಪಂಜ, ಪೂಜಾ ನಾಯಕ್, ಅನನ್ಯ ಸುಳ್ಯ, ಅಂಜನಾ ಸುಳ್ಯ ಪಾತ್ರಧಾರಿಗಳಾಗಿದ್ದರು.