ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆ.7ರಂದು ಶಾರದಾ ದೇವಿ ಶಿಲಾ ವಿಗ್ರಹವನ್ನು, ಶಾಲಾ ವಿದ್ಯಾರ್ಥಿಗಳು ವೇದ ಪಠಣ, ಪೂಜೆ ಮತ್ತು ಭಜನೆ ಮಾಡುವುದರ ಮೂಲಕ ಅನಾವರಣಗೊಳಿಸಲಾಯಿತು.
ಶಾಲಾ ಪೋಷಕರಾದ ವಿಂಧ್ಯಾ ವಿ. ನಾಯಕ್ ಮತ್ತು ವೆಂಕಟರಮಣ ನಾಯಕ್ ಇಂದಾಜೆ ವಿಗ್ರಹದ ದಾನಿಗಳಾಗಿದ್ದು, ಸಮಾರಂಭದ ನೇತೃತ್ವವನ್ನು ವಹಿಸಿ, ಎಲ್ಲರಿಗೂ ಸಿಹಿ ತಿಂಡಿಯನ್ನು ವಿತರಿಸಿದರು.
ಶಾಲಾ ಅಧ್ಯಕ್ಷರಾದ ವಸಂತಿ ಕೆ, ಸಂಚಾಲಕರಾದ ಭರತ್ ಪೈ, ಸದಸ್ಯರಾದ ಶಂಕರಿ ಶರ್ಮ, ಶಾಲಾ ಪ್ರಾಂಶುಪಾಲರಾದ ಸಿಂಧು ವಿ ಜಿ, ಉಪಪ್ರಾಂಶುಪಾಲರಾದ ಶ್ರೀದೇವಿ ಹೆಗ್ಡೆ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.