ಪುತ್ತೂರು: ಮರೀಲಿನಲ್ಲಿರುವ ವಿದ್ಯಾಕೀರ್ತಿ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ರಿ. ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇ.ಎಸ್.ಆರ್. ಪ್ರೆಸಿಡೆನ್ಸಿ ಸ್ಕೂಲ್ ಮರೀಲ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಮತ್ತು ಎರಡನೇ ಪ್ರಧಾನಮಂತ್ರಿಯಾಗಿರುವ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಝಾಕೀರ್ ಹುಸೇನ್ ರಾಷ್ಟ್ರೀಯ ನಾಯಕರ ತ್ಯಾಗವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ವಿಸ್ಮಿತ ಬಂಗೇರ, ಸಹಶಿಕ್ಷಕರಾದ ಫಾತಿಮಾತ್ ಝೀಯಾನ, ಸಯೀದಾ, ಶ್ವೇತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರಾಷ್ಟ್ರ ನಾಯಕರ ಧೀರತ್ವವನ್ನು ನೆನೆಸಿ, ಕಾರ್ಯಕ್ರಮಕ್ಕೆ ಸಾಕ್ಷಿಯಾದರು.