ಪುತ್ತೂರು:ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆ.8ರಂದು ಆಚರಿಸಲಾಯಿತು. ಮುಖ್ಯ ಅತಿಥಿ ಲೇಖಕಿ, ರಾಜಶ್ರೀ ಟಿ ರೈ ಪೆರ್ಲ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಲಕ್ಷ್ಮಿಯ ಜನ್ಮ ವೃತ್ತಾಂತ ಪುರಾಣ ಕಥೆಯೊಂದಿಗೆ ನಮ್ಮಲ್ಲಿರುವ ಅಹಂಕಾರಗಳು ದೂರವಾಗಿ ಸದ್ಗುಣಗಳು ಮೈದಳೆಯಬೇಕು. ಸಚ್ಚಾರಿತ್ರ್ಯಗಳನ್ನು ನಿಮ್ಮಲ್ಲಿ ಒಡಮೂಡಿಸಲು ಒಳ್ಳೆಯ ಶಿಕ್ಷಣ ಸಂಸ್ಥೆಯನ್ನೇ ಆಯ್ಕೆ ಮಾಡಿದ್ದೀರಿ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರಲಿ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಜಯಲಕ್ಷ್ಮಿ ಗುಮ್ಮಟಗದ್ದೆ ಸರಸ್ವತಿಯ ಆರಾಧನೆಯೊಂದಿಗೆ ಮನದುದ್ದಕ್ಕೂ ವಿದ್ಯೆಯನ್ನು ಕರಗತ ಮಾಡಿಕೊಂಡಲ್ಲಿ ಲಕ್ಷ್ಮಿಯೊಲಿಯುವಳು ಎಂದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಶಾರದಮ್ಮ ಬೆಟ್ಟಂಪಾಡಿ ಉಪಸ್ಥಿತರಿದ್ದರು. ಮುಖ್ಯ ಗುರು ರಾಜೇಶ್ ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವರಮಹಾಲಕ್ಷ್ಮಿ ಹಬ್ಬದ ಸಂಕೇತವಾಗಿ ಎಲ್ಲಾ ಮಾತಾಜಿಯವರಿಗೆ ಬಾಗಿನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಶಶಿ ಸ್ವಾಗತಿಸಿ, ಸಹ ಶಿಕ್ಷಕಿ ಭಾಗ್ಯಶ್ರೀ ರೈ ವಂದಿಸಿದರು. ಸಹ ಶಿಕ್ಷಕಿ ಮೋನಿಷಾ ಕಾರ್ಯಕ್ರಮ ನಿರೂಪಿಸಿದರು.