ಪುತ್ತೂರು : ಸವಣೂರು ಯುವಕ ಮಂಡಲ ಮತ್ತು ಸರಕಾರಿ ಪ್ರೌಢಶಾಲಾ ವಿಭಾಗ ಇದರ ಜಂಟಿ ಆಶ್ರಯದಲ್ಲಿ ನೇಜಿ ನಾಟಿ ಕಾರ್ಯಕ್ರಮವು ಆ.8 ರಂದು ಮೀನಾಕ್ಷಿ ಕೋಡಿಬೈಲು ಇವರ ಗದ್ದೆಯಲ್ಲಿ ನಡೆಯಿತು.

ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಸುರೇಶ್ ರೈ ಸೂಡಿ ಮುಳ್ಳು, ತಾರನಾಥ ಕಾಯರ್ಗ, ಮಹೇಶ್ ಕೆ ಸವಣೂರು, ಗಿರಿಶಂಕರ ಸುಲಾಯ, ತೀರ್ಥರಾಮ ಕೆಡೆಂಜಿ, ಗಂಗಾಧರ ಪೆರಿಯಡ್ಕ, ಗಂಗಾಧರ ಸುಣ್ಣಾಜೆ, ಸಚಿನ್ ಸವಣೂರು, ಸತೀಶ್ ಬಲ್ಯಾಯ, ಪ್ರಭಾಕರ ನಡುಬೈಲು, ರಾಜೇಶ್ ಇಡ್ಯಾಡಿ, ಭವಿತ್ ಕುಮಾರ್, ತೇಜಸ್ ಬೇರಿಕೆ, ವಿನಯ ನಾಲ್ಗುತ್ತು, ಹಿತೇಶ್ ನೆಕ್ಕರೆ, ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕ ವರ್ಗಕ್ಕೆ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕೋಡಿಬೈಲು, ಕೀರ್ತನ್ ಕೋಡಿಬೈಲು ಅತಿಥಿಗಳನ್ನು ಸ್ವಾಗತಿಸಿದರು.