ಪುತ್ತೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಸ್ತರಿಸಿದ ಪ್ರಾಸ್ಟೇಟ್ಗೆ ಚಿಕಿತ್ಸೆ ನೀಡುವ, ಅತ್ಯಾಧುನಿಕ ಹಾಗೂ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾವಿಧಾನವಾದ REZUM ಅನ್ನು ದಕ್ಷಿಣಕನ್ನಡ ಮತ್ತು ಉಡುಪಿಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರಿಚಯಿಸಿದೆ.

ರೀಜಮ್ ರೀಜಮ್ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ನೀರಿನವಾಷ್ಪದ ಶಕ್ತಿಯನ್ನು ಬಳಸುವ ಪರಿಣಾಮಕಾರಿಯಾದ ವಿಧಾನವಾಗಿದೆ. ಇದು ದೀರ್ಘಕಾಲದ ಮೂತ್ರ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಲೈಂಗಿಕ, ಮೂತ್ರಕ್ರಿಯೆಗಳ ರಕ್ಷಣೆ ಮಾಡುತ್ತದೆ. ದಿನದೊಳಗಿನ ಚಿಕಿತ್ಸೆ (ಡೇಕೇರ್) ಆಗಿದ್ದು, ಇದು ಸುರಕ್ಷಿತ ಮತ್ತು ಸೌಲಭ್ಯ ಪೂರ್ಣವಾಗಿದೆ.
ರೋಗಿಗಳಿಗೆ ಈಚಿಕಿತ್ಸೆಯಿಂದ ಲಭ್ಯವಾಗುವ ಲಾಭಗಳು:
ಪ್ರಕ್ರಿಯೆ ಸಮಯ ಬಹಳ ಕಡಿಮೆ
ಚಿಕಿತ್ಸೆ ನೋವಿಲ್ಲದೆ ನಡೆಯುತ್ತದೆ
ರಕ್ತಹಾನಿಯಿಲ್ಲ
ಆಸ್ಪತ್ರೆವಾಸದ ಅವಧಿ ಬಹಳ ಕಡಿಮೆ
ಯಾವುದೇ ಗಂಭೀರ ಪಾರ್ಶ್ವ ಪರಿಣಾಮಗಳಿಲ್ಲ
ಈ ಚಿಕಿತ್ಸೆಯನ್ನು ಈಗಾಗಲೇ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಚಿಕಿತ್ಸೆ ಪಡೆದ ರೋಗಿಗಳು ತಮ್ಮ ಮೂತ್ರದ ತೊಂದರೆಗಳಿಂದ ಸಾಕಷ್ಟು ಶಮನ ಪಡೆದಿದ್ದು, ಅವರು ಬೇಗನೆ ಚೇತರಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಎ.ಜೆ. ಆಸ್ಪತ್ರೆಯು ತನ್ನ ವೈದ್ಯಕೀಯ ಗುಣಮಟ್ಟ ಮತ್ತು ಹೊಸತಂತ್ರಜ್ಞಾನದ ಮೇಲಿರುವ ನಿಷ್ಠೆಯನ್ನು ಮತ್ತಷ್ಟು ಬಲಪಡಿಸಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ ರೋಗಿಗಳಿಗೆ ಅತ್ಯಾಧುನಿಕ ಮೂತ್ರಾಂಗ ಸಂಬಂಧಿತ ಚಿಕಿತ್ಸೆಗಳು ಈಗ ಲಭ್ಯವಾಗಿವೆ.