ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ.20 ರಂದು ಕುಂಬ್ರ ರೈತ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಕ್ಷರದಾಸೋಹದ ಸಹಾಯಕ ನಿರ್ದೇಶಕರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಡಲಿದ್ದಾರೆ. ಗ್ರಾಮಸಭೆಯ ಪೂರ್ವಭಾವಿಯಾಗಿ ವಾರ್ಡ್ ಸಭೆಗಳು ಆ.11 ಮತ್ತು 14ರಂದು ನಡೆಯಲಿದೆ.
ಆ.11ರಂದು ಬೆಳಿಗ್ಗೆ ವಾರ್ಡ್ 4 ರ ಸಭೆಯು ಸದಸ್ಯ ಮಹೇಶ್ ರೈಯವರ ಅಧ್ಯಕ್ಷತೆಯಲ್ಲಿ ಅಜ್ಜಿಕಲ್ಲು ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ಅಪರಾಹ್ನ ವಾರ್ಡ್ 3ರ ಸಭೆಯ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದರ್ಬೆತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ಆ.14ರಂದು ಬೆಳಿಗ್ಗೆ 10.30 ಕ್ಕೆ ವಾರ್ಡ್ 1 ರ ಸಭೆಯು ಸದಸ್ಯ ಅಬ್ದುಲ್ ಸಿರಾಜುದ್ದೀನ್ ರವರ ಅಧ್ಯಕ್ಷತೆಯಲ್ಲಿ ಕೊಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದ್ದು ಬೆಳಿಗ್ಗೆ 11.30ಕ್ಕೆ ಸದಸ್ಯ ಅಶ್ರಫ್ ಉಜಿರೋಡಿಯವರ ಅಧ್ಯಕ್ಷತೆಯಲ್ಲಿ ಕುಟ್ಟಿನೋಪಿನಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.
ವಾರ್ಡ್ ಸಭೆಗಳಿಗೆ ಆಯಾ ವಾರ್ಡ್‌ನ ಮತದಾರರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ವಾರ್ಡ್‌ನ ಕುಂದುಕೊರತೆ,ಬೇಡಿಕೆಗಳನ್ನು ಸಲ್ಲಿಸಬೇಕಾಗಿ ವಿನಂತಿ ಅದೇ ರೀತಿ ಆ.20ರಂದು ನಡೆಯುವ ಗ್ರಾಮಸಭೆಗೆ ಗ್ರಾಮದ ಸಮಸ್ತ ಮತದಾರ ಬಾಂಧವರು ಆಗಮಿಸಿ ತಮ್ಮ ಗ್ರಾಮದ ಬೇಡಿಕೆ, ಸಮಸ್ಯೆ ಹಾಗೇ ಗ್ರಾಮದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಶ್ ನಾಯ್ಕ್ ಕೆ, ಕಾರ್ಯದರ್ಶಿ ಜಯಂತಿ, ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಸರ್ವ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.