ಬೀಡಿ ಕಾರ್ಮಿಕರ ಬೋನಸ್ ಸಾವಿರ ಬೀಡಿಗೆ ರೂ. 43.34

0

ಪುತ್ತೂರು: ಪ್ರತಿ ವರ್ಷದಂತೆ ಈ ವರ್ಷವೂ ಬೀಡಿಕಾರ್ಮಿಕರ ಬೋನಸ್,ರಜಾಸಂಬಳ, ಹಬ್ಬದ ರಜಾಸಂಬಳ ಒಟ್ಟಿಗೆ ಬಿಡುಗಡೆಯಾಗಿದ್ದು ಪ್ರತಿ ಸಾವಿರ ಬೀಡಿಗೆ ರೂ.43.34ರಂತೆ ಅಂದರೆ 1 ಲಕ್ಷ ಬೀಡಿಕಟ್ಟಿದವರಿಗೆ ತಲಾ ರೂ.4,334 ಬೋನಸ್ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಪಿ.ಕೆ.ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್, ಖಜಾಂಜಿ ಈಶ್ವರಿಶಂಕರ್ ಮುಂಡೂರು ಅವರು ತಿಳಿಸಿದ್ದಾರೆ.


ಅದಲ್ಲದೆ ಸರಕಾರ ನಿಗದಿ ಪಡಿಸಿದ ಹೊಸ ಕನಿಷ್ಟ ಕೂಲಿ ಪ್ರತಿ ಸಾವಿರ ಬೀಡಿಗೆ ರೂ.391.92ರಂತೆ ಸಿಗಬೇಕಿದ್ದು, ಅದರಲ್ಲಿ ಬೀಡಿ ಮಾಲಕರು ಈಗ ಸರಕಾರದ ಆದೇಶ ಉಲ್ಲಂಘಿಸಿ ಪ್ರತಿ ಸಾವಿರ ಬೀಡಿಗೆ ರೂ.284.88ರಂತೆ ಮಾತ್ರ ಬಿಡುಗಡೆ ಮಾಡಿ ರೂ.17.07 ಬಾಕಿ ಮಾಡಿರುತ್ತಾರೆ.ನಿಜವಾಗಿ ಸರಕಾರವೇ ಕಾರ್ಮಿಕರಿಗೆ ಈ ಬೆಲೆ ಏರಿಕೆ ನಡುವೆ ಪ್ರತಿ ಸಾವಿರಕ್ಕೆ ರೂ. 330ಕ್ಕಿಂತ ಹೆಚ್ಚು ನೀಡಬೇಕಿದ್ದ ವೇತನವನ್ನು ರೂ 301.92ಕ್ಕೆ ಇಳಿಯುವಂತೆ ಮಾಡಿ ಹಿಮ್ಮುಖ ಆದೇಶ ಮಾಡಿತ್ತು.ಆದರೆ ಮಾಲಕರ ಪರವಾಗಿ ನಿಂತ ಸರಕಾರದ ಆದೇಶದ ವೇತನವನ್ನೂ ಬೀಡಿ ಮಾಲಕರು ನೀಡುತ್ತಿಲ್ಲ ಎಂಬುದನ್ನು ಸರಕಾರ ಮನಗಾಣಬೇಕು.ಈಗ ಬೀಡಿ ಮಾಲಕರು ನೀಡಿದ ವೇತನದಲ್ಲಿ ಪ್ರತಿ ಸಾವಿರ ಬೀಡಿ ವೇತನದಲ್ಲಿ ಪಿ.ಎಫ್. ರೂ. 29 ಕಡಿತಗೊಂಡು ರೂ.255.88ರಂತೆ ಕಾರ್ಮಿಕರ ಹಸ್ತ ವೇತನ ನೀಡಬೇಕಿದೆ.ಈ ವೇತನವನ್ನು ಕೆಲವು ಬೀಡಿ ಕಂಪೆನಿಗಳು 01.04.2025ರಿಂದ, ಇನ್ನು ಕೆಲವು ಕಂಪೆನಿಗಳು ಜುಲೈ 1ರಿಂದ ನೀಡಿರುತ್ತಾರೆ.ಬೋನಸ್ ಮತ್ತು ವೇತನ ಸಮರ್ಪಕವಾಗಿ ಸಿಗದವರು 9448155980, 8792591538, 9448311240 ನಂಬ್ರಕ್ಕೆ ಕರೆ ಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here