ಹಿರೇಬಂಡಾಡಿ: ಇಲ್ಲಿನ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಆ.27 ಮತ್ತು 28ರಂದು ನಡೆಯುವ 108 ತೆಂಗಿನಕಾಯಿ ಶ್ರೀ ಮಹಾಗಣಪತಿ ಹೋಮ ಹಾಗೂ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಶಾಂತಿತ್ತಡ್ಡ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ನಾರಾಯಣ ಕನ್ಯಾನ, ಕಾರ್ಯದರ್ಶಿ ನವೀನ್ ಪಡ್ಪು, ಕೋಶಾಧಿಕಾರಿ ಬೆಳಿಯಪ್ಪ ಗೌಡ ಜಾಲು, ವಿಠಲ ಪರಕೊಡಂಗೆ, ಜಗದೀಶ ಹಂಚಿನಮನೆ, ನವೀನ್ ಕುಬಲ, ಜಯಪ್ರಕಾಶ್ ಉಪಸ್ಥಿತರಿದ್ದರು.