ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಸರಕಾರಿ ಹಿ.ಪ್ರಾ.ಶಾಲಾ ವಠಾರದಲ್ಲಿ ಗ್ರಾಮ ವಿಕಾಸ ಸಂಘ ಪಡ್ಪು ಮುದ್ಯ ಇದರ ವತಿಯಿಂದ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಗ್ರಾಮದ ಪ್ರಮುಖರಾದ ವಿಲ್ಪ್ರೆಡ್ ಡಿ.ಸೋಜ ಮುದ್ಯ, ದಾಮೋದರ ಗೌಡ ಶೇಡಿಗುತ್ತು ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ದಯಾನಂದ ಅರಾಲುತೋಟ, ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ಕುಮಾರ್ ನೀರಕಟ್ಟೆ, ಕೋಶಾಧಿಕಾರಿ ಮೋಹನ ಗೌಡ ದಡ್ಡು ಜವಾಬ್ದಾರಿ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಉಮೇಶ್ ಓಡ್ರಪಾಲು, ಶಾಲಾ ಎಸ್ಡಿಎಂಸಿ ಸದಸ್ಯರಾದ ಹರಿಯಪ್ಪ ನಡುವಡ್ಕ, ಅಝೀಜ್ ವಳಾಲು, ಕೇಶವ ಜಾನಪಾಲು, ಶಾಲಾ ಮುಖ್ಯಶಿಕ್ಷಕ ಮಂಜುನಾಥ್, ಶಿಕ್ಷಕರಾದ ಮೀನಾ, ಮೋಹನ್, ಸಂಘದ ಸದಸ್ಯರಾದ ಸದಾನಂದ ಶಿಬಾರ್ಲ, ಸುಂದರ ಟೈಲರ್ ಕೊಡಿಪಾನ ಉಪಸ್ಥಿತರಿದ್ದರು. ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದರು.