ನಾಳೆಯಿಂದ(ಆ.10-12) ಕಲ್ಲಮ ಮಠದಲ್ಲಿ 354ನೇ ಆರಾಧನಾ ಮಹೋತ್ಸವ

0

ಪುತ್ತೂರು: ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಇಲ್ಲಿ 354ನೇ ಆರಾಧನಾ ಮಹೋತ್ಸವ ಆ.10ರಿಂದ ಆ.12ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಆ.10ರಂದು ಪೂರ್ವಾರಾಧನೆ, ಬೆಳಿಗ್ಗೆ ಉಷಾ ಕಾಲ ಪೂಜೆ, ಅಭಿಷೇಕ, ಬೆಳಿಗ್ಗೆ ಗಂಟೆ 8ರಿಂದ ಶ್ರೀ ಸನ್ನಿಧಿಯಲ್ಲಿ ಶ್ರೀ ನಂದಿಕೇಶ್ವರ ದೇವರಿಗೆ ಏಕದಶರುದ್ರಾಭಿಷೇಕ ಮಧ್ಯಾಹ್ನ ಗಂಟೆ 12ಕ್ಕೆ ಅಷ್ಟೋತ್ತರ ಮಹಾಪೂಜೆ, ಸಂಜೆ ಗಂಟೆ 6ಕ್ಕೆ ಭಜನೆ, ಸಂಜೆ ಗಂಟೆ 6.30ಕ್ಕೆ ಸತ್ಯನಾರಾಯಣ ಪೂಜೆ, ರಾತ್ರಿ ಗಂಟೆ 8ರಿಂದ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ಉತ್ಸವ, ಅಷ್ಟಾವಧಾನ, ರಾತ್ರಿ ಗಂಟೆ 9ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.


ಆ.11ರಂದು ಆರಾಧನೆ, ಬೆಳಿಗ್ಗೆ ಉಷಾ ಕಾಲ ಪೂಜೆ, ಪಂಚಾಮೃತ ಅಭಿಷೇಕ ಸೀಯಾಳ ಅಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಬೆಳಿಗ್ಗೆ ಗಂಟೆ 6ರಿಂದ ಸಂಜೆ ಗಂಟೆ 6ರ ತನಕ ಜಯರಾಜ್ ಸುವರ್ಣ ನೇತೃತ್ವದಲ್ಲಿ ಅರ್ಧ ಏಕಾಹ ಭಜನೆ, ಸಂಜೆ ಗಂಟೆ 6ರಿಂದ 7ರ ವರೆಗೆ ಸಂಗೀತ ಕಛೇರಿ, ರಾತ್ರಿ ಗಂಟೆ 7ರಿಂದ 8ರ ವರೆಗೆ ಭರತನಾಟ್ಯ ನಡೆಯಲಿದೆ.
ರಾತ್ರಿ ಗಂಟೆ 8ಕ್ಕೆ ರಂಗಪೂಜೆ, ಉತ್ಸವ, ಅಷ್ಟಾವಧಾನ, ರಾತ್ರಿ ಗಂಟೆ 9ಕ್ಕೆ ಮಹಾಮಂಗಳಾರತಿ, ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.

ಆ.12ರಂದು ಉತ್ತರಾರಾಧನೆ, ಬೆಳಿಗ್ಗೆ ಉಷಾ ಕಾಲ ಪೂಜೆ, ಅಭಿಷೇಕ, ಮಧ್ಯಾಹ್ನ 12ಕ್ಕೆ ಅಷ್ಟೋತ್ತರ ಮಹಾಪೂಜೆ, ಸಂಜೆ ಗಂಟೆ 5ರಿಂದ ರಾತ್ರಿ ಗಂಟೆ 8ರ ವರೆಗೆ ಶ್ರೀ ರಾಮ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಸಂಜೆ ಗಂಟೆ 6.30ಕ್ಕೆ ಭಜನೆ, ರಾತ್ರಿ ಗಂಟೆ 8ಕ್ಕೆ ರಂಗಪೂಜೆ, ಉತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತ ವ್ಯವಸ್ಥಾಪಕರಾದ ಡಾ.ಕೆ ಸೀತಾರಾಮ ಭಟ್ ಕಲ್ಲಮ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here