ಪುತ್ತೂರು: ಕುಂಬ್ಲಾಡಿ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ,ಪ್ರಗತಿಪರ ಕೃಷಿಕ ಚಾರ್ವಕ ಗ್ರಾಮದ ವೆಂಕಪ್ಪ ಗೌಡ ಕಂಪ ಕರಂದ್ಲಾಜೆಯವರು ಅಲ್ಪ ಕಾಲದ ಅಸೌಖ್ಯದಿಂದ ಜು.24ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಆ.9ರಂದು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕುಟುಂಬದ ಹಿರಿಯರಾದ ಕೇಶವ ಗೌಡ ಕರಂದ್ಲಾಜೆಯವರು ದೀಪ ಪ್ರಜ್ವಲನೆ ಮಾಡಿದರು. ಪ್ರಗತಿಪರ ಕೃಷಿಕ ಮಾಧವ ಗೌಡ ಮತ್ತು ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಇವರು ದಿ.ವೆಂಕಪ್ಪ ಗೌಡ ಕಂಪ ಕರಂದ್ಲಾಜೆ ಇವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ದಿ.ವೆಂಕಪ್ಪ ಗೌಡರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ತಾಯಿ ನೀಲಮ್ಮ, ಪತ್ನಿ ಭಾಗ್ಯಶ್ರೀ, ಪುತ್ರರಾದ ಚರಿತ್, ಜೀವಿತ್, ಸಹೋದರಿಯರು, ಕುಟುಂಬಸ್ಥರು ಉಪಸ್ಥಿತರಿದ್ದರು.