ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್ ಗಾಂಧಿನಗರ ಮಂಗಳೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬೆಳ್ಳಿಪಾಡಿ ಘಟಕ ಹಾಗೂ ಫ್ರೆಂಡ್ಸ್ ಬೆಳ್ಳಿಪ್ಪಾಡಿ ಘಟಕದ ಸಹಯೋಗದೊಂದಿಗೆ NITTE ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ, ಸಮುದಾಯದಂತ ವಿಭಾಗ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಬೆಳ್ಳಿಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.10ರಂದು ನಡೆಯಿತು.
ಕೃಷಿಕ ಬೆಳ್ಳಿಪಾಡಿ ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ ದೀಪ ಪ್ರಜ್ವಲನೆ ಮಾಡಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಮಹೇಂದ್ರವರ್ಮ ಜೈನ್ , ಮನೋಹರ ಡಿ. ವಿ, ರವಿಕುಮಾರ್ ರೈ ಕೆದಂಬಾಡಿ ಮಠ, ವಸಂತ ಗೌಡ ಕೈಲಾಜೆ, ಸೀತಾರಾಮ ಶೆಟ್ಟಿ, ಕಾರ್ತಿಕ್ ರೈ ಬೆಳ್ಳಿಪಾಡಿ, ರಾಮಣ್ಣ ಗೌಡ ಗುಂಡೇಲೆ, ಮಲ್ಲಿಕಾ ಅಶೋಕ್ ಪೂಜಾರಿ,ಲಕ್ಷ್ಮಣ ಗೌಡ ಕಂಬಳದಡ್ಡ, ಮೋಹನ ಪಕ್ಕಳ ಕುಂಡಾಪು,ವಾಸುದೇವ ಆಚಾರ್ಯ,ಸುಮಿತ್ರಾ ನಾಯ್ಕ ,ಮೋಹಿನಿ ಕೆ., ರಾಮಚಂದ್ರ ಪೂಜಾರಿ, ಸತೀಶ್ ಪೂಜಾರಿ,ಯತೀಶ್ ಪೋಳ್ಯ, ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಅನೇಕರು ವೈದ್ಯಕೀಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.