ಪುತ್ತೂರು: ಯುವತಿಯರ ಹಾಗೂ ಮಹಿಳೆಯರ ಉಡುಪುಗಳನ್ನು ಹಲವು ಬಗೆಯ ವಿನ್ಯಾಸದೊಡನೆ ಭಿನ್ನ-ವಿಭಿನ್ನ ಶೈಲಿಯಲ್ಲಿ ಹೊಲಿಗೆ ಮತ್ತು ಎಂಬ್ರಾಯ್ಡರಿ ಮೂಲಕ ಸಿದ್ಧಪಡಿಸಿ ಕೊಡುತ್ತಿರುವ ಮಹಾಬಲ ರೈ ಇವರ ಮಾಲಕತ್ವದ ಹೆಸರಾಂತ ಟೈಲರಿಂಗ್ ಮಳಿಗೆ ಕಳೆದ 27 ವರ್ಷಗಳಿಂದ ಕಲ್ಲಾರೆ ಪವಾಝ್ ಕಾಂಪ್ಲೆಕ್ಸ್, ಬಳಿಕ ಮುಂಭಾಗದಲ್ಲಿರುವ ಕಾವೇರಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ವ್ಯವಹರಿಸುತ್ತಿರುವಂತಹ ಅಪ್ಸರಾ ಲೇಡಿಸ್ ಟೈಲರಿಂಗ್ ಆ್ಯಂಡ್ ಎಂಬ್ರಾಯ್ಡರಿ ವರ್ಕ್ಸ್ ಇದರ ನೂತನ ಶಾಖೆ ಅಪ್ಸರಾ ಲೇಡಿಸ್ ಟೈಲರ್ ಆ.11 ರಂದು ಮುಖ್ಯರಸ್ತೆ ಜಿ.ಎಲ್ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಂ. ನರೇಂದ್ರ ತೆಂಕಿಲ ಇವರು ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಕುಟುಂಬಕ್ಕೆ ಸುಮಾರು 25 ವರುಷಗಳಿಂದ ಅಪ್ಸರಾ ಟೈಲರಿಂಗ್ ಸಂಸ್ಥೆಯೊಡನೆ ಒಡನಾಟವಿದೆ. ಟೈಲರಿಂಗ್ ವೃತ್ತಿಯಲ್ಲಿ ಬಹಳಷ್ಟೂ ಅನುಭವವಿರುವಂತಹ ತಂಡವನ್ನು ಅಪ್ಸರಾ ಹೊಂದಿದ್ದು, ಎಂಬ್ರಾಯ್ಡರಿ ಕೆಲಸ ಕೂಡ ಉತ್ತಮ. ಇನ್ನೂ ಅತ್ಯುತ್ತಮ ಕಾರ್ಯದ ಮೂಲಕ ಈ ಸಂಸ್ಥೆ ಮತ್ತಷ್ಟೂ ಯಶಸ್ಸು ಕಾಣಲಿ ಜೊತೆಗೆ ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದವು ಇರಲಿಯೆಂದು ಹೇಳಿ ಹಾರೈಸಿದರು.
ರಾಮಪ್ರಕಾಶ್ ಜ್ಯವೆಲ್ಲರ್ಸ್ ಮಾಲಕ ಆಶೋಕ್ ಆಚಾರ್ಯ, ವಸಂತ್ ಶೆಟ್ಟಿ ದರ್ಬೆ, ಪುಷ್ಪಾವತಿ ನರೇಂದ್ರ ತೆಂಕಿಲ, ಮಾಲಕರ ಬಾವ ಮಂಜುನಾಥ ಶೇಖ, ಪತ್ನಿ ನಾಗವೇಣಿ ಮಹಾಬಲ ರೈ , ಪುತ್ರಿ ಪ್ರತಿಮಾ ರೈ ಹಾಗೂ ಮೊಮ್ಮಗ ರಾಂ ಸ್ವರೂಪ್ ಮತ್ತು ಸಹೋದರ ಹರೀಶ್ ರೈ , ಸಿಬಂದಿಗಳಾದ ವೈಶಾಲಿ ,ಸೌಮ್ಯ ,ಅಂಕಿತಾ ,ಜ್ಯೋತಿ ,ಸೌಮ್ಯ ಎ , ಶಿವಾಣಿ ,ಮೊಯೀನುದ್ದೀನ್ , ಅಲ್ತಫ್ , ಸೈಫುಲ್ಲಾ ಹಾಗೂ ಜಾಕೀರ್ ಹಾಜರಿದ್ದರು. ಮಹಾಬಲ ರೈ ಸ್ವಾಗತಿಸಿ, ಸಹಕಾರ ಕೋರಿ, ವಂದಿಸಿದರು.