ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಸಂತ ಫಿಲೋಮಿನಾಳ ಹಬ್ಬ, ಕೃತಜ್ಞತಾ ಬಲಿಪೂಜೆ

0

ದೇವರಲ್ಲಿ ಭಯ ಭಕ್ತಿ ಇಡಬೇಕು- ವಂ. ಅವಿತ್ ಪಾಯ್ಸ್
ಪ್ರಾರ್ಥನೆಯಿಂದ ಆಧ್ಯಾತ್ಮಿಕ ಬೆಳಕು ಪಡೆಯಬೇಕು- ವಂ. ಲಾರೆನ್ಸ್ ಮಸ್ಕರೇನಸ್

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಅನುದಾನಿತ ಪ್ರೌಢಶಾಲೆಯಲ್ಲಿ ಪಾಲಕಿ ಸಂತ ಫಿಲೋಮಿನಾಳ ಹಬ್ಬವನ್ನು ಆ.11ರಂದು ಆಚರಿಸಲಾಯಿತು. ದೇವರ ವರ ಕೃಪೆಗಳಿಗಾಗಿ ಕೃತಜ್ಞತಾ ಬಲಿ ಪೂಜೆಯನ್ನು ಸಂಸ್ಥೆಯ ದಿವ್ಯಚೇತನ ಪ್ರಾರ್ಥನಾ ಮಂದಿರದಲ್ಲಿ ಅರ್ಪಿಸಲಾಯಿತು.


ಮಿಲಾಗ್ರಿಸ್ ಚರ್ಚ್‌ನ ಸಹಾಯಕ ಗುರುಗಳಾದ ವಂ. ಅವಿತ್ ಪಾಯ್ಸ್‌ರವರು ಮಾತನಾಡಿ ದೇವರಲ್ಲಿ ಭಯ ಭಕ್ತಿಯನ್ನು ಇಡಬೇಕು ಅವರು ನೀಡಿದ ಕಟ್ಟಳೆಗಳನ್ನು ಪಾಲಿಸಿಕೊಂಡು ದಯಾಳುಗಳಾಗಿ ಬದುಕಬೇಕು ಎಂದು ಹೇಳಿದರು. ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನ್ಹಸ್‌ರವರು ಪ್ರಧಾನ ಗುರುಗಳಾಗಿ ಪೂಜೆ ನೆರವೇರಿಸಿದರು. ಮರೀಲು ಚರ್ಚ್‌ನ ಧರ್ಮಗುರು ವಂ. ಜೋನ್ ಬಾಪ್ತಿಸ್ಟ್, ಸಾಂತ್ ಥೋಮ್ ಗುರು ಮಂದಿರದ ಧರ್ಮಗುರು ವಂ. ರೋಬಿನ್, ಸಂತ ಫಿಲೋಮಿನಾ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ವಂ. ಆಂಟನಿ ಪ್ರಕಾಶ್, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ. ಅಶೋಕ್ ರಾಯನ್ ಕ್ರಾಸ್ತಾ, ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ. ಮರ್ವಿನ್ ಪ್ರವೀಣ್ ಲೋಬೊ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ವಂ. ಮ್ಯಾಕ್ಸಿಮ್ ಡಿಸೋಜ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸಭಾಕಾರ್ಯಕ್ರಮ:
ಬಲಿಪೂಜೆ ಬಳಿಕ ಶಾಲಾ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂತ ಮಿಲಾಗ್ರಿಸ್ ಚರ್ಚ್‌ನ ಸಹಾಯಕ ಗುರುಗಳಾದ ವಂ. ಅವಿತ್ ಪಾಯ್ಸ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಪ್ರತೀದಿನ ಪ್ರಾರ್ಥನೆಯನ್ನು ಮಾಡಬೇಕು ದೇವರ ವಾಕ್ಯವನ್ನು ಓದಬೇಕು ಆ ಮೂಲಕ ಆಧ್ಯಾತ್ಮಿಕ ಬೆಳಕನ್ನು ಪಡೆಯಬೇಕು. ದೇಹ ಮತ್ತು ಆತ್ಮದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು. ಸಹಾಯಕ ಧರ್ಮಗುರು ವಂ. ಮರ್ವಿನ್ ಪ್ರವೀಣ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಪ್ರೌಢಶಾಲೆಯ ರಕ್ಷಕ- ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ಭಾರತಿ, ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಕೇಶ್, ಶಾಲಾ ಮುಖ್ಯಗುರು ವಂ ಮ್ಯಾಕ್ಸಿಮ್ ಡಿಸೋಜ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರ, ಉಭಯ ಶಾಲೆಗಳ ವಿದ್ಯಾರ್ಥಿ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಹಿರಿಯ ವಿದ್ಯಾರ್ಥಿ ಹಾಗೂ ಮುಖ್ಯ ಅತಿಥಿಯಾದ ವಂ. ಅವಿತ್ ಪಾಯ್ಸ್‌ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಾಧಿಸುವವರಿಗೆ ಯಾವುದು ಅಸಾಧ್ಯವಿಲ್ಲ. ಒಳ್ಳೆಯ ನಾಗರಿಕರಾಗಿ ಸಹಬಾಳ್ವೆಯನ್ನು ನಡೆಸೋಣ ಎಂದರು.

ಸಂತ ಫಿಲೋಮಿನಾಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಂತ ಫಿಲೋಮಿನಾಳ ಬಗ್ಗೆ ಶಿಕ್ಷಕಿ ಜಾಸ್ಮಿನ್ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಗುರು ವಂ. ಮ್ಯಾಕ್ಸಿಮ್ ಡಿಸೋಜಾ ಸ್ವಾಗತಿಸಿದರು. ಸಂತ ಫಿಲೋಮಿನ ಪ್ರೌಢಶಾಲೆಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಅತಿಥಿಗಳಿಗೆ ವಿತರಿಸಲಾಯಿತು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಫಿಲೋ ಪ್ರತಿಭಾ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿಯರಾದ ಕಾರ್ಮಿನ್ ಪಾಯ್ಸ್ ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಚೇತನ ವಂದಿಸಿದರು. ರೇಷ್ಮಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಉಭಯ ಶಾಲೆಗಳ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿದ್ಯಾರ್ಥಿಗಳಿಗೆ ಲಘು ಉಪಹಾರ/ಮಧ್ಯಾಹ್ನ ಭೋಜನವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here