ಪುತ್ತೂರು: ಪರಿಶಿಷ್ಠ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.10ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು ಮಾತನಾಡಿ, 58 ವರ್ಷಗಳ ಇತಿಹಾಸವಿರುವ ಲ್ಯಾಂಪ್ಸ್ ಸಹಕಾರಿ ಸಂಘವು ಕಾಡುತ್ಪತ್ತಿಯ ವ್ಯವಹಾರ ಮಾಡುತ್ತಿದ್ದ ನಮ್ಮ ಸಂಘವು ಬ್ಯಾಂಕಿಂಗ್ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಪುತ್ತೂರಿನ ಸಂಘವು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಸಮಾಜ ಬಾಂಧವರು ಸಂಘದ ಮುಖಾಂತರ ವ್ಯವಹಸಿರುವ ಮೂಲಕ ಸಂಘದ ಉನ್ನತೀಕರಣಕ್ಕೆ ಸದಸ್ಯರು ಸಹಕರಿಸುವಂತೆ ವಿನಂತಿಸಿದರು.
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಲದ ಉಪಾಧ್ಯಕ್ಷ, ಸಂಘದ ನಿರ್ದೇಶಕ ಮಂಜುನಾಥ ಎನ್.ಎಸ್ ಮಾತನಾಡಿ, ಉತ್ತಮ ವ್ಯವಹಾರ, ಅಚ್ಚುಕಟ್ಟಾಗಿ ನಿರ್ವಹಣೆ ಮೂಲಕ ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘವು 23 ಸಹಕಾರಿ ಸಂಘಗಳಲ್ಲಿಯೇ ರಾಜ್ಯದಲ್ಲಿ ಹೆಸರು ಪಡೆದಿದೆ ಎಂದರು.
ಸಂಘದ ವ್ಯವಹಾರ:
ವರದಿ ವರ್ಷದಲ್ಲಿ ಸಂಘವು ರೂ.48,94,190 ಪಾಲು ಬಂಡವಾಳ ಹಾಗೂ ರೂ.24,15,616 ಸರಕಾರದ ಪಾಲು ಬಂಡವಾಳವಿರುತ್ತದೆ. ರೂ.1,09,06,823 ಸಂಚಯ ಠೇವಣಿ, ರೂ.12,24,450.00 ಮಾಸಿಕ ಠೇವಣಿ, 4,27,57,866ನಿರಖು ಠೇವಣಿ, ರೂ.70,20,020 ಸ್ವರ್ಣ ನಿತ್ಯನಿಧಿ ಠೇವಣಿ, 1,57,00,209-15ರೂ.ಇತರ ನಿಧಿಗಳನ್ನು ಹೊಂದಿರುತ್ತದೆ. ವಿವಿಧ ಬ್ಯಾಂಕ್‌ಗಳಲ್ಲಿ ರೂ.1,30,54,151.69 ಧನವಿನಿಯೋಗ ಮಾಡಲಾಗಿದೆ. ರೂ.61,500ನ್ನು ವಿವಿಧ ಬ್ಯಾಂಕ್‌ಗಳಲ್ಲಿ ಪಾಲು ಬಂಡವಾಳದಲ್ಲಿ ವಿನಿಯೋಗಿಸಲಾಗಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ಒಟ್ಟು ರೂ.5,23,57,627 ಸಾಲ ವಿತರಿಸಲಾಗಿದ್ದು ಶೇ.95 ಸಾಲ ವಸೂಲಾತಿಯಾಗಿರುತ್ತದೆ ಎಂದು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಮಾಹಿತಿ ನೀಡಿದರು.
ಹಿರಿಯ ಸದಸ್ಯರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಕೊರಗಪ್ಪ ನಾಯ್ಕ ಮುಂಡೂರು, ಪರಮೇಶ್ವರ ನಾಯ್ಕ ಬಾಳೆಗುಳಿ, ವೆಂಕಪ್ಪ ನಾಯ್ಕ ಅರಿಯಡ್ಕ, ಚೋಮ ನಾಯ್ಕ ಚಿಕ್ಕಮುಡ್ನೂರು, ಚೋಮ ನಾಯ್ಕ ಸೋಂಂಗೇರಿ ಇವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘ ನಿರ್ದೇಶಕ ಕರುಣಾಕರ ಪಾಂಗಳಾಯಿಯವರನ್ನು ಅಭಿನಂದಿಸಲಾಯಿತು.
ನಿರ್ದೇಶಕರಾದ ಪೂವಪ್ಪ ನಾಯ್ಕ ಎಸ್., ಧರ್ಣಪ್ಪ ನಾಯ್ಕ, ನೇತ್ರಾಕ್ಷ ಏಣಿತ್ತಡ್ಕ, ಮಹಾಲಿಂಗ ಬಿ.ನಾಯ್ಕ, ಕರುಣಾಕರ ಟಿ.ಎನ್., ರಾಧಾ ಹೆಂಗ್ಸು ಹಾಗೂ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬಂದಿ ಭವ್ಯ ಪ್ರಾರ್ಥಿಸಿದರು. ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಜಿ. ವಾರ್ಷಿಕ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಅಪ್ಪಯ್ಯ ನಾಯ್ಕ ತಳೆಂಜಿ ವಂದಿಸಿದರು. ಸಿಬಂದಿಗಳಾದ ಹೊನ್ನಪ್ಪ ನಾಯ್ಕ, ಬಾಬು ನಾಯ್ಕ ಹೆಚ್., ನಾಣ್ಯಪ್ಪ ಪಿ., ಪೂವಪ್ಪ ನಾಯ್ಕ, ರವಿಕಲಾ ಟಿ.ನಾಯ್ಕ, ಕೃಷ್ಣಪ್ಪ ನಾಯ್ಕ, ಸುಮನ್‌ರಾಜ್ ಆರ್. ಹರೀಶ್ ನಾಯ್ಕ ಎಂ., ಪಿಗ್ಮಿಸಂಗ್ರಾಹಕರಾದ ರಾಮಣ್ಣ ನಾಯ್ಕ, ಶೇಖರ ನಾಯ್ಕ, ಅಶ್ವಿನಿ, ನಿತೇಶ್ ಡಿ. ಮತ್ತು ಶಿಲ್ಪಾ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನೆರವೇರಿತು.